ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ಸಂಕಷ್ಟದ ನಡುವೆ ಜನರಿಗೆ ವಿದ್ಯುತ್ ಬಿಲ್‌ ಶಾಕ್​ - JESCOM

ಕಳೆದ ಮಾರ್ಚ್​, ಏಪ್ರಿಲ್ ತಿಂಗಳಲ್ಲಿ ಸರಾಸರಿ ಬಿಲ್ ಪಾವತಿಸಿಕೊಂಡಿದ್ದ ಜೆಸ್ಕಾಂ, ಈ ತಿಂಗಳಿನಲ್ಲಿ ಡಬಲ್​ ಹಣ ಪಾವತಿಸುವಂತೆ ಜನರಿಗೆ ಬಿಲ್​ ನೀಡಿದೆ. ಈ ಹಿನ್ನೆಲೆ ಗ್ರಾಹಕರು ಜೆಸ್ಕಾಂ ಎಇಇ ಕಚೇರಿಗೆ ಆಗಮಿಸಿ, ಹೆಚ್ಚುವರಿ ಬಿಲ್ ಬಂದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

JESCOM
ಲಾಕ್​ಡೌನ್​ ಸಂಕಷ್ಟದ ನಡುವೆ ಜನರಿಗೆ ಶಾಕ್​ ನೀಡಿದ ವಿದ್ಯುತ್​ ಬಿಲ್​

By

Published : May 11, 2020, 4:15 PM IST

Updated : May 11, 2020, 8:31 PM IST

ಕುಷ್ಟಗಿ (ಕೊಪ್ಪಳ) : ಲಾಕ್​ಡೌನ್​​ ಸಂಕಷ್ಟದ ನಡುವೆಯೇ ದುಪ್ಪಟ್ಟು ವಿದ್ಯುತ್​​ ಬಿಲ್​​ ​ ಬಂದಿರುವುದು ಜನರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಕಳೆದ ಮಾರ್ಚ್​, ಏಪ್ರಿಲ್ ತಿಂಗಳಲ್ಲಿ ಸರಾಸರಿ ಬಿಲ್ ಪಾವತಿಸಿಕೊಂಡಿದ್ದ ಜೆಸ್ಕಾಂ, ಈ ತಿಂಗಳಿನಲ್ಲಿ ಡಬಲ್​ ಹಣ ಪಾವತಿಸುವಂತೆ ಜನರಿಗೆ ಬಿಲ್​ ನೀಡಿದೆ. ಈ ಹಿನ್ನೆಲೆ ಗ್ರಾಹಕರು ಜೆಸ್ಕಾಂ ಎಇಇ ಕಚೇರಿಗೆ ಆಗಮಿಸಿ, ವಿದ್ಯುತ್ ಹೆಚ್ಚುವರಿ ಬಿಲ್ ಬಂದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೂ ಕೂಡ ಬಿಲ್​ ಪಾವತಿಸಲೇ ಬೇಕು ಇಲ್ಲವಾದರೆ ವಿದ್ಯುತ್​ ಸಂಪರ್ಕ ಕಡಿತಗೊಳಿಸುತ್ತೇವೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ.

ಗ್ರಾಹಕ ಶರಣಪ್ಪ ವಡಿಗೇರಿ ಅವರು, ಕಳೆದ ತಿಂಗಳು 550 ರೂ. ಮೊತ್ತದ ಬಿಲ್ ಪಾವತಿಸಿದ್ದರು. ಇದೀಗ 808 ರೂ. ಬಿಲ್​ ಬಂದಿದೆ. ಹಾಗೆ ಇನ್ನೋರ್ವ ಗ್ರಾಹಕ

ಗ್ರಾಹಕ ಪ್ರಕಾಶಗೌಡ ಬೆದವಟ್ಟಿ ಎಂಬುವರು ಏಪ್ರಿಲ್​ನಲ್ಲಿ 1020 ರೂ. ಪಾವತಿಸಿದ್ದರು. ಮೇ ತಿಂಗಳ ಬಿಲ್ 6,117 ರೂ. ಬಂದಿದೆ. ಇದನ್ನು ನೋಡಿದ ಗ್ರಾಹಕರು ತೀವ್ರ ಆಕ್ರೋಶಕ್ಕೆ ಒಳಗಾಗಿದ್ದಾರೆ. ಜೆಸ್ಕಾಂ ಎಇಇ ಮಂಜುನಾಥ ಅವರು ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿ, ಬಿಲ್ ಹೆಚ್ಚುವರಿ ವ್ಯತ್ಯಾಸವಾಗಿಲ್ಲ, ಯೂನಿಟ್ ಆಧರಿಸಿಯೇ ಬಿಲ್ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Last Updated : May 11, 2020, 8:31 PM IST

ABOUT THE AUTHOR

...view details