ಕರ್ನಾಟಕ

karnataka

ETV Bharat / state

ಜಯನಗರ ಸರಣಿ ಕಳ್ಳತನ: ಪೊಲೀಸ್‌ ವೈಫಲ್ಯ ಆರೋಪಿಸಿ ಗೃಹ ಸಚಿವರಿಗೆ ದೂರು - Jayanagar serial burglary

ಜಯನಗರದಲ್ಲಿ ಒಂದೇ ವಾರದಲ್ಲಿ ಆರು ಸರಣಿ ಕಳ್ಳತನ ಪ್ರಕರಣಗಳು ನಡೆದಿದ್ದು, ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್‌ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಇಲ್ಲಿನ ನಾಗರಿಕರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ದೂರು ಸಲ್ಲಿಸಿದರು.

Jayanagar serial burglary: Home minister complains against police failure
ಜಯನಗರ ಸರಣಿ ಕಳ್ಳತನ: ಪೊಲೀಸರ ವೈಫಲ್ಯಯತೆ ವಿರುದ್ಧ ಗೃಹ ಸಚಿವರಿಗೆ ದೂರು

By

Published : Feb 14, 2020, 6:55 PM IST

ಗಂಗಾವತಿ:ಜಯನಗರದಲ್ಲಿ ಒಂದೇ ವಾರದಲ್ಲಿ ನಡೆದ ಆರು ಸರಣಿ ಕಳ್ಳತನ ನಡೆದಿದೆ. ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿ ಜಯನಗರ ನಿವಾಸಿಗಳು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ದೂರು ನೀಡಿದ್ದಾರೆ.

ಜಯನಗರ ಸರಣಿ ಕಳ್ಳತನ: ಪೊಲೀಸ್‌ ವೈಫಲ್ಯ ಆರೋಪಿಸಿ ಗೃಹ ಸಚಿವರಿಗೆ ದೂರು

ಒಂದೇ ವಾರದಲ್ಲಿ ಜಯನಗರ ಒಂದರಲ್ಲಿಯೇ ಆರು ಮನೆಗಳಲ್ಲಿ ಕಳ್ಳತನವಾಗಿದೆ. ಇದರಿಂದ ಸಹಜವಾಗಿ ಜನರಲ್ಲಿ ಮತ್ತಷ್ಟು ಕಳ್ಳತನ ನಡೆಯುವ ಆತಂಕ ಎದುರಾಗಿದೆ. ಈಗಾಗಲೇ ಬೆರಳಚ್ಚು, ಶ್ವಾನದಳ ಘಟನಾ ಸ್ಥಳಕ್ಕೆ ಭೇಟಿ ನೀಡಿ ತೆರಳಿದ್ದಾರೆ. ಆದರೆ, ಯಾವ ಪ್ರಯೋಜನವೂ ಆಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ABOUT THE AUTHOR

...view details