ಕರ್ನಾಟಕ

karnataka

ETV Bharat / state

ಜನ್​ಧನ್​ ಖಾತೆಗೆ ಜಮೆಯಾದ ಹಣ: ಬ್ಯಾಂಕ್​​ ಮುಂದೆ ಜನರ ನೂಕುನುಗ್ಗಲು - Gangavathi latest news

ಜನ್​ಧನ್​ ಖಾತೆಗೆ ಕೇಂದ್ರ ಸರ್ಕಾರದಿಂದ ಜಮೆಯಾದ ಹಣ ಪಡೆಯಲು ಫಲಾನುಭವಿಗಳು ಬ್ಯಾಂಕ್​ ಮುಂದೆ ಜಮಾಯಿಸಿದ್ದಾರೆ.

ಬ್ಯಾಂಕ್​
Jandhan

By

Published : Apr 4, 2020, 4:39 PM IST

ಗಂಗಾವತಿ:ವಿವಿಧ ಬ್ಯಾಂಕ್​ಗಳಲ್ಲಿ ತೆರೆಯಲಾಗಿರುವ ಪ್ರಧಾನಮಂತ್ರಿ ಜನ್​​ಧನ್ ಯೋಜನೆಯಲ್ಲಿನ ಉಳಿತಾಯ ಖಾತೆಗೆ ಕೇಂದ್ರ ಸರ್ಕಾರ 500 ರೂಪಾಯಿ ಹಾಕಿದ್ದು, ಹಣ ಪಡೆದುಕೊಳ್ಳಲು ಫಲಾನುಭವಿಗಳು ನೂಕುನುಗ್ಗಲು ನಡೆಸಿದ ಘಟನೆ ನಗರದಲ್ಲಿ ನಡೆದಿದೆ.

ಬ್ಯಾಂಕ್​ ಮುಂದೆ ಜಮಾಯಿಸಿರುವ ಜನರು

ಕೊರೊನಾ ವೈರಸ್​ನಿಂದ ಇಡೀ ದೇಶ ಲಾಕ್​ಡೌನ್​ ಆದ ಹಿನ್ನೆಲೆ ಬಡ ಜನರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರದಿಂದ ಮುಂದಿನ ಮೂರು ತಿಂಗಳ ಕಾಲ ಪ್ರತಿ ತಿಂಗಳ ತಲಾ 500 ರೂಪಾಯಿ ಜಮೆ ಮಾಡುವುದಾಗಿ ಪ್ರಧಾನಿ ಮೋದಿ ಘೋಷಣೆ ಮಾಡಿದ್ದರು. ಈ ಹಿನ್ನೆಲೆ ಶುಕ್ರವಾರ ಖಾತೆಗಳಿಗೆ ಹಣ ಜಮೆಯಾಗಿದೆ.

ತಮ್ಮ ಉಳಿತಾಯ ಖಾತೆಗೆ ಜಮೆಯಾದ ಸರ್ಕಾರದ ಹಣ ಪಡೆದುಕೊಳ್ಳಲು ಫಲಾನುಭವಿಗಳು ಏಕಕಾಲಕ್ಕೆ ಮುಗಿಬಿದ್ದ ಪರಿಣಾಮ ಶನಿವಾರ ಇಲ್ಲಿನ ನಾನಾ ಬ್ಯಾಂಕ್​ಗಳ ಮುಂದೆ ಜನಜಂಗುಳಿ ಏರ್ಪಟ್ಟಿತ್ತು.

ಈಗಾಗಲೇ ಕೊರೊನಾ ಭೀತಿಯಿಂದಾಗಿ ಎಲ್ಲೆಡೆ ಲಾಕ್​ಡೌನ್​ ಆದೇಶ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದ್ದರೂ ಜನ ಮಾತ್ರ ಇದಕ್ಕೆ ಸೂಕ್ತ ಸ್ಪಂದಿಸುತ್ತಿಲ್ಲ. ಕನಿಷ್ಠಪಕ್ಷ ಸಾಮಾಜಿಕ ಅಂತವರನ್ನೂ ಪಾಲಿಸದೇ ಜನ ಹಣಕ್ಕೆ ಮುಗಿಬೀಳುತ್ತಿರುವುದು ಕಂಡುಬರುತ್ತಿದೆ.

ABOUT THE AUTHOR

...view details