ಗಂಗಾವತಿ:ತಮ್ಮ ರಾಜಕೀಯ ನಡೆಯ ಬಗ್ಗೆ ಕುತೂಹಲ ಕಾಯ್ದಿಟ್ಟುಕೊಂಡಿರುವ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ, ಇಂದು ನಗರದ ಮಠ, ಮಂದಿರ, ದರ್ಗಾಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದರ್ಗಾವೊಂದಕ್ಕೆ ಆರು ಕೋಟಿ ರೂಪಾಯಿ ದೇಣಿಗೆ ನೀಡಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಇಲ್ಲಿನ ಪೀರಜಾಧೆ ರಸ್ತೆಯಲ್ಲಿರುವ ಖಲಿಲುಲ್ಲಾ ಖಾದ್ರಿ ದರ್ಗಾಕ್ಕೆ ರೆಡ್ಡಿ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಗುರುಗಳು, ಶತಮಾನಗಳ ಕಾಲದ ಇತಿಹಾಸ ಹೊಂದಿರುವ ಈ ದರ್ಗಾದ ನವೀಕರಣ ಕೈಗೊಳ್ಳಲಾಗುತ್ತಿದೆ ಎಂದು ಕಟ್ಟಡದ ನಕಾಶೆ ತೋರಿಸಿದ್ದರು. ಈ ವೇಳೆ ರೆಡ್ಡಿ ದರ್ಗಾಕ್ಕೆ ಉದಾರ ದೇಣಿಗೆ ನೀಡಿದ್ದರು ಎನ್ನುವ ಮಾತುಗಳು ಕೇಳಿಬಂದಿದ್ದವು.