ಕರ್ನಾಟಕ

karnataka

ETV Bharat / state

ಗುತ್ತಿಗೆದಾರನ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ - ಕೊಪ್ಪಳ ಜಿಲ್ಲೆಯಲ್ಲಿ ಐಟಿ ದಾಳಿ

ಕೊಪ್ಪಳ ಮೂಲದ ಗುತ್ತಿಗೆದಾರರಿಗೆ ಐಟಿ ಅಧಿಕಾರಿಗಳು ಶಾಕ್​ ನೀಡಿದ್ದು, ಮನೆ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

IT raid on building construction house in koppal
ಗುತ್ತಿಗೆದಾರನ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ

By

Published : Oct 7, 2021, 5:45 PM IST

ಕೊಪ್ಪಳ: ಜಿಲ್ಲೆಯಲ್ಲಿ ಸಹ ಐಟಿ ಅಧಿಕಾರಿಗಳ ದಾಳಿ ಜೋರಾಗಿದ್ದು, ಗುತ್ತಿಗೆದಾರ ಎಂ ಶ್ರೀನಿವಾಸ ಎಂಬುವವನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಗುತ್ತಿಗೆದಾರನ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ

ಬೆಂಗಳೂರಿನಲ್ಲಿ ನೆಲೆಸಿರುವ ಮೂಲತಃ ಗುತ್ತಿಗೆದಾರರಾಗಿರುವ ಎಂ. ಶ್ರೀನಿವಾಸ್ ಅವರ ಗಂಗಾವತಿ ತಾಲೂಕಿನ ಕೋಟಯ್ಯಕ್ಯಾಂಪ್​​ನಲ್ಲಿರುವ ಮನೆ ಮೇಲೆ ಹುಬ್ಬಳ್ಳಿಯಿಂದ ಬಂದಿರುವ 6 ಜನ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದೆ.

ಖಾಲಿ ಬಿಟ್ಟಿರುವ ಮನೆಯ ಉಸ್ತುವಾರಿಯನ್ನು ಶ್ರೀನಿವಾಸ್ ಅವರ ಮಾವ ನೋಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳ ದಾಳಿ ವೇಳೆ ಹಲವು ದಾಖಲೆಗಳು ದೊರಕಿವೆ ಎಂದು ತಿಳಿದು ಬಂದಿದೆ. ಐಟಿ ಅಧಿಕಾರಿಗಳು ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ.

ಇದನ್ನೂ ಓದಿ:ಐಟಿ ದಾಳಿ ಬಗ್ಗೆ ಯಡಿಯೂರಪ್ಪ ಅವರನ್ನೇ ಕೇಳಿ.. ಈ ಬಾರಿ ಬೈ ಎಲೆಕ್ಷನ್​ನಲ್ಲಿ ನಾವೇ ಗೆಲ್ಲೋದು: ಸಿದ್ದರಾಮಯ್ಯ

ABOUT THE AUTHOR

...view details