ಗಂಗಾವತಿ :ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ, ಕಳೆದ ಒಂದು ದಶಕದಿಂದ ತಲೆಮರೆಸಿಕೊಂಡಿದ್ದ ಅಂತಾರಾಜ್ಯ ಸುಲಿಗೆಕೋರನನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ನೆರೆಯ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆ ಕಾವಲಿ ತಾಲೂಕಿನ ಕಪಾಲತಿಪ್ಪಾ ಗ್ರಾಮದ ಸಿ.ಹೆಚ್. ಬಾಬು ಶಂಕ್ರಯ್ಯ ಚಲ್ಲಾ ಎಂದು ಗುರುತಿಸಲಾಗಿದೆ. ಈತ ವೃತ್ತಿಪರ ಸುಲಿಗೆಕೋರನಾಗಿದ್ದು, ನಾನಾ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ.