ಕುಷ್ಟಗಿ(ಕೊಪ್ಪಳ) :ಕುಷ್ಟಗಿ ತಾಲೂಕಾದ್ಯಂತ ಉತ್ತಮ ಮಳೆ ಹಿನ್ನೆಲೆ ಸಜ್ಜೆ, ಮೆಕ್ಕೆಜೋಳ ಭರ್ಜರಿ ಫಸಲು ಬಂದಿದೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡಿದ್ದು, ಈ ಹಿನ್ನೆಲೆ ಕೂಡಲೇ ಈ ಎರಡು ಬೆಳೆಗಳ ಖರೀದಿ ಕೇಂದ್ರ ಆರಂಭಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೈನ್ಯ ಕಾರ್ಯಕರ್ತರು, ಗ್ರೇಡ್-2 ತಹಶೀಲ್ದಾರ್ ಹೆಚ್ ವಿಜಯಾ ಅವರಿಗೆ ಮನವಿ ಸಲ್ಲಿಸಿದರು.
ಮಾರುಕಟ್ಟೆಯಲ್ಲಿ ಸಜ್ಜೆ ಪ್ರತಿ ಕ್ವಿಂಟಲ್ಗೆ ₹1,600 ರಿಂದ 1,700, ಮೆಕ್ಕೆಜೋಳ ಪ್ರತಿ ಕ್ವಿಂಟಲ್ಗೆ ₹1,700 ದಿಂದ 1,800 ರೂ. ಇತ್ತು. ಬೆಳೆ ಉತ್ಪನ್ನ ಹೆಚ್ಚುತ್ತಿದ್ದಂತೆ ಸದ್ಯ ಸಜ್ಜೆ 1,100 ರೂ., ಮೆಕ್ಕೆಜೋಳ 1,200 ರೂ. ಪ್ರತಿ ಕ್ವಿಂಟಲ್ಗೆ ಕುಸಿತ ಕಂಡಿದೆ. ಪ್ರಸಕ್ತ ವರ್ಷದಲ್ಲಿ ಉತ್ತಮ ಮಳೆ, ಬೆಳೆ ಇದ್ದಾಗ್ಯೂ ನ್ಯಾಯಯುತ ಬೆಲೆಯಿಂದ ರೈತರು ವಂಚಿತರಾಗುವ ಸಾಧ್ಯತೆಗಳಿವೆ. ಹೀಗಾಗಿ, ಮೆಕ್ಕೆಜೋಳ ಹಾಗೂ ಸಜ್ಜೆ ಬೆಂಬಲ ಕೇಂದ್ರ ಸ್ಥಾಪಿಸಬೇಕು.