ಕರ್ನಾಟಕ

karnataka

ETV Bharat / state

ಇನ್ನರವ್ಹೀಲ್​ ಕ್ಲಬ್​ನಿಂದ ಅಶಕ್ತರಿಗೆ ಸಹಾಯ; ಸಾರ್ವಜನಿಕರ ಮೆಚ್ಚುಗೆ - Kushtagi in Koppal district

ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಇನ್ನರವ್ಹೀಲ್ ಕ್ಲಬ್ ವತಿಯಿಂದ ಅಶಕ್ತರಿಗೆ ಸಹಾಯ ಮಾಡಲಾಗಿದ್ದು, ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.

Inner Club of Kushtagi
ಕುಷ್ಟಗಿಯ ಇನ್ನರ್ ಕ್ಲಬ್ ವತಿಯಿಂದ ಅಶಕ್ತರಿಗೆ ಸಹಾಯ

By

Published : Feb 13, 2021, 5:28 PM IST

ಕುಷ್ಟಗಿ/ಕೊಪ್ಪಳ: ಕುಷ್ಟಗಿಯ ಇನ್ನರವ್ಹೀಲ್ ಕ್ಲಬ್ ವಿಶೇಷ ಚೇತನ ವಿದ್ಯಾರ್ಥಿನಿ ಭಾಗ್ಯಶ್ರೀಗೆ 80 ಸಾವಿರ ರೂ. ಮೌಲ್ಯದ ತ್ರಿಚಕ್ರ ವಾಹನ ಕೊಡುಗೆಯಾಗಿ ನೀಡಿದೆ.

ಕುಷ್ಟಗಿಯ ಇನ್ನರ್ ಕ್ಲಬ್ ವತಿಯಿಂದ ಅಶಕ್ತರಿಗೆ ಸಹಾಯ

ಸ್ಥಳೀಯ ಬಿಸಿಎಂ ಹಾಸ್ಟೆಲ್​ನಲ್ಲಿದ್ದು ಬಿ.ಎ. ದ್ವಿತೀಯ ವರ್ಷ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಾಲೇಜಿಗೆ ಹೋಗಿ ಬರಲು ಅಂಗವೈಕಲ್ಯ ಅಡ್ಡಿಯಾಗಿತ್ತು. ವಿದ್ಯಾರ್ಥಿನಿ ಸಮಸ್ಯೆ ಮನಗಂಡ ಕ್ಲಬ್‌ ಸದಸ್ಯರು ಹಾಗೂ ದೇಣಿಗೆ ಸಹಾಯದಿಂದ ಸ್ಕೂಟಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ವೇಳೆ ಕ್ಲಬ್ ಅಧ್ಯಕ್ಷೆ ಮೇಘಾ ದೇಸಾಯಿ ಹಾಗೂ ವಂದನಾ ಗೋಗಿ ಇಬ್ಬರು ಬಡ ವಿದ್ಯಾರ್ಥಿಯರಿಗೆ ಟ್ಯಾಬ್ ವಿತರಿಸಿದರು.

ಮಗಳ ಮದುವೆ ಖರ್ಚು ಹೊಂದಿಸಲು ಕಂಗಾಲಾಗಿದ್ದ ಲಕ್ಷ್ಮವ್ವಳಿಗೆ ಎಲ್ಲಾ ಸದಸ್ಯರು ಸೇರಿ ಚಿನ್ನದ ಮಾಂಗಲ್ಯ, ಬೆಳ್ಳಿ ಕಾಲುಂಗುರ, ಗೆಜ್ಜೆ, ರೇಷ್ಮೆ ಸೀರೆಯನ್ನು ಕೊಡುಗೆ ನೀಡಿದರು.

ABOUT THE AUTHOR

...view details