ಕರ್ನಾಟಕ

karnataka

ETV Bharat / state

ಶಿಶು ಅಭಿವೃದ್ಧಿ ಯೋಜನೆ : ಮಕ್ಕಳು, ಬಾಣಂತಿಯರು, ಗರ್ಭಿಣಿಯರಿಗೆ ಕಳಪೆ ಆಹಾರ ಪೂರೈಕೆ - pregnant women

ಆರು ತಿಂಗಳಿಂದ ಮೂರು ವರ್ಷದ ಮಕ್ಕಳಲ್ಲಿ ಬಲ ವೃದ್ಧಿಗೆಂದು ಇಲಾಖೆ ಪೂರೈಸಿದ ಹೆಸರು ಬೇಳೆ ಪಾಯಸ ಮಿಶ್ರಣದಲ್ಲಿ ಕಲಬೆರೆಕೆಯಾಗಿದೆ. ಎಳೆಯ ಮಕ್ಕಳಿಗೆ ಈ ಬಗ್ಗೆ ಹೇಳಲೂ ಆಗದ ಅಥವಾ ವ್ಯಕ್ತಪಡಿಸಲಾಗದ ಸ್ಥಿತಿಯಲ್ಲಿರುತ್ತವೆ.

ಆಹಾರ ಪೂರೈಕೆ
ಆಹಾರ ಪೂರೈಕೆ

By

Published : Jun 13, 2020, 10:08 PM IST

ಗಂಗಾವತಿ :ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಶಿಶು ಅಭಿವೃದ್ಧಿ ಯೋಜನೆಯಡಿ ಪ್ರಸಕ್ತ ಜೂನ್ ತಿಂಗಳಲ್ಲಿ ವಿತರಿಸಲಾಗಿರುವ ಪೌಷ್ಠಿಕ ಆಹಾರ ಪದಾರ್ಥ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪ ಕೇಳಿ ಬಂದಿದೆ.

ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವಿತರಿಸಲು ಇಲಾಖೆ ನಿಗಧಿ ಪಡಿಸಿದ್ದಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಮಕ್ಕಳ ಮತ್ತು ಮಹಿಳೆಯ ಪೌಷ್ಠಿಕ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡಲಾಗಿದೆ ಎಂದು ಫಲಾನುಭವಿಗಳು ದೂರಿದ್ದಾರೆ.

ಕಳಪೆ ಗುಣಮಟ್ಟದ ಪದಾರ್ಥಗಳು

ಆರು ತಿಂಗಳಿಂದ ಮೂರು ವರ್ಷದ ಮಕ್ಕಳಲ್ಲಿ ಬಲ ವೃದ್ಧಿಗೆಂದು ಇಲಾಖೆ ಪೂರೈಸಿದ ಹೆಸರು ಬೇಳೆ ಪಾಯಸ ಮಿಶ್ರಣದಲ್ಲಿ ಕಲಬೆರೆಕೆಯಾಗಿದೆ. ಎಳೆಯ ಮಕ್ಕಳಿಗೆ ಈ ಬಗ್ಗೆ ಹೇಳಲೂ ಆಗದ ಅಥವಾ ವ್ಯಕ್ತಪಡಿಸಲಾಗದ ಸ್ಥಿತಿಯಲ್ಲಿರುತ್ತವೆ. ದೊಡ್ಡವರು ಈ ಹೆಸರು ಬೇಳೆ ಪಾಯಸದ ರುಚಿ ನೋಡಿದಾಗ ಮಾತ್ರ ಕಲ್ಲು ಮಿಶ್ರಿತ ಆಹಾರ ಪೂರೈಕೆಯಾಗಿರುವುದು ಪತ್ತೆಯಾಗಿದೆ ಎಂದು ಇಲ್ಲಿನ ಗಾಂಧಿನಗರದ ನಿವಾಸಿ ಅಲಮೇಲಮ್ಮ ಚಲುವಾದಿ ಆರೋಪಿಸಿದ್ದಾರೆ.

ABOUT THE AUTHOR

...view details