ಗಂಗಾವತಿ(ಕೊಪ್ಪಳ):ಸತತ ಮೂರು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಇಲ್ಲಿನ ಗುಂಡಮ್ಮಕ್ಯಾಂಪ್ ಇಂದಿರಾ ಕ್ಯಾಂಟೀನ್ಗೆ ಕೊನೆಗೂ ಕಾಲ ಕೂಡಿ ಬಂದಿದ್ದು, ಶಾಸಕ ಪರಣ್ಣ ಮುನವಳ್ಳಿ ಹಾಗೂ ನಗರಸಭಾ ಅಧ್ಯಕ್ಷೆ ಮಾಲಾಶ್ರೀ ಚಾಲನೆ ನೀಡಿದರು.
ನನೆಗುದಿಗೆ ಬಿದ್ದಿದ್ದ ಗುಂಡಮ್ಮಕ್ಯಾಂಪ್ ಇಂದಿರಾ ಕ್ಯಾಂಟೀನ್ ಪುನಾರಂಭ - ಇಂದಿರಾ ಕ್ಯಾಂಟೀನ್ ಪುನರಾರಂಭ
ಕೂಲಿಕಾರರು, ಬಡವರು, ನಿರ್ಗತಿಕರು ಊಟವಿಲ್ಲದೇ ಪರದಾಡಬಾರದು ಎಂಬ ಕಾರಣಕ್ಕೆ ನಿತ್ಯ ಮಧ್ಯಾಹ್ನ ಮತ್ತು ರಾತ್ರಿ ಎರಡೂ ಹೊತ್ತು ಇಲ್ಲಿ ಊಟ ನೀಡಲಾಗುವುದು
Indhira canteen
ಲಾಕ್ಡೌನ್ ಸಂದರ್ಭದಲ್ಲಿ ಜನ, ಅದರಲ್ಲೂ ವಿಶೇಷವಾಗಿ ಕೂಲಿಕಾರರು, ಬಡವರು, ನಿರ್ಗತಿಕರು ಊಟವಿಲ್ಲದೇ ಪರದಾಡಬಾರದು ಎಂಬ ಕಾರಣಕ್ಕೆ ನಿತ್ಯ ಮಧ್ಯಾಹ್ನ ಮತ್ತು ರಾತ್ರಿ ಎರಡೂ ಹೊತ್ತು ಇಲ್ಲಿ ಊಟ ನೀಡಲಾಗುವುದು ಎಂದು ಶಾಸಕರು ಹೇಳಿದರು.
ಮಧ್ಯಾಹ್ನ ಹಾಗೂ ರಾತ್ರಿ 500 ಒಟ್ಟು 1 ಸಾವಿರ ಜನರಿಗೆ ಊಟ ಮಾಡಿಸಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದಿಂದ ಮಂಜೂರಾಗುವ ಅನುದಾನ ಆಧರಿಸಿ ಈ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆಯ ಅಧ್ಯಕ್ಷೆ ಮಾಲಾಶ್ರೀ ಹೇಳಿದರು.