ಗಂಗಾವತಿ :ನಗರದಲ್ಲಿ ಕೊರೊನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ನಿತ್ಯ ಸರಾಸರಿ ನಲವತ್ತರಂತೆ ಹೊಸ ಪ್ರಕರಣ ಪತ್ತೆಯಾಗುತ್ತಿರುವುದು ಆರೋಗ್ಯ ಇಲಾಖೆ, ಜಿಲ್ಲಾಡಳಿತ ಮಾತ್ರವಲ್ಲ, ನಗರದ ಜನರಲ್ಲೂ ಆತಂಕಕ್ಕೆ ಕಾರಣವಾಗಿದೆ.
ಗಂಗಾವತಿಯಲ್ಲಿ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ ; ದಿನಕ್ಕೆ ಮೂನ್ನರಕ್ಕೂ ಹೆಚ್ಚು ಜನರಿಂದ ಪರೀಕ್ಷೆ - Gangavathi corona infections news
ಈಗಾಗಲೇ ಕೊರೊನಾ ಸಮುದಾಯಕ್ಕೆ ಹರಡಿದ್ದು, ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗಲು ಕಾರಣ ಎನ್ನಲಾಗಿದೆ. ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಈ ಮೊದಲು ಅಂದರೆ ಏಪ್ರಿಲ್ 2ನೇ ವಾರದವರೆಗೂ ಕೇವಲ ಹತ್ತರಿಂದ ಇಪ್ಪತ್ತು ಸ್ವ್ಯಾಬ್ ಟೆಸ್ಟ್ ಮಾತ್ರ ನಡೆಸಲಾಗುತ್ತಿತ್ತು..

ಗಂಗಾವತಿಯಲ್ಲಿ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ
ಗಂಗಾವತಿಯಲ್ಲಿ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ
ಈಗಾಗಲೇ ಕೊರೊನಾ ಸಮುದಾಯಕ್ಕೆ ಹರಡಿದ್ದು, ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗಲು ಕಾರಣ ಎನ್ನಲಾಗಿದೆ. ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಈ ಮೊದಲು ಅಂದರೆ ಏಪ್ರಿಲ್ 2ನೇ ವಾರದವರೆಗೂ ಕೇವಲ ಹತ್ತರಿಂದ ಇಪ್ಪತ್ತು ಸ್ವ್ಯಾಬ್ ಟೆಸ್ಟ್ ಮಾತ್ರ ನಡೆಸಲಾಗುತ್ತಿತ್ತು.
ಆದರೆ, ಇದೀಗ ದಿನಕ್ಕೆ 300ರ ಗಡಿ ದಾಟುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗೆ ಪರೀಕ್ಷಿಸಿಕೊಂಡವರಲ್ಲಿ ನಿತ್ಯ ಸರಾಸರಿ 40ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿರುವುದು ಮತ್ತೊಂದು ಆತಂಕ ಮೂಡಿಸುತ್ತಿದೆ.