ಗಂಗಾವತಿ:ತಾಲೂಕಿನ ಪ್ರವಾಸಿ ತಾಣವಾದ ಆನೆಗೊಂದಿಯಲ್ಲಿ ಗ್ರಾಮ ಪಂಚಾಯಿತಿಯಿಂದ ನಿರ್ಮಿಸಲಾದ ಹೈಟೆಕ್ ಶೌಚಾಲಯವನ್ನು ತಾಲೂಕು ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ರಫಿ ಉದ್ಘಾಟಿಸಿದರು.
ಗಂಗಾವತಿ: ಪ್ರವಾಸಿ ಕೇಂದ್ರದಲ್ಲಿ ಸಾಮೂಹಿಕ ಹೈಟೆಕ್ ಶೌಚಾಲಯ ಉದ್ಘಾಟನೆ - ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಜನಾದೇವಿ
ಪ್ರವಾಸಿ ತಾಣವಾದ ಆನೆಗೊಂದಿಗೆ ಸಾಕಷ್ಟು ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ. ಅವರಿಗೆ ಮೂತ್ರ ಮತ್ತು ಶೌಚದ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಪಂಚಾಯಿತಿ ಅನುದಾನದಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಜನಾದೇವಿ ತಿಳಿಸಿದರು.
ಪ್ರವಾಸಿ ಕೇಂದ್ರದಲ್ಲಿ ಸಾಮೂಹಿಕ ಹೈಟೆಕ್ ಶೌಚಾಲಯ ಉದ್ಘಾಟನೆ.
ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ನಾಲ್ಕು ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಶೌಚಾಲಯ ನಿರ್ಮಿಸಲಾಗಿದ್ದು, ವೃದ್ಧರು, ವಿಕಲಚೇತನರಿಗೂ ಉಪಯೋಗವಾಗಲಿ ಎಂಬ ಕಾರಣಕ್ಕೆ ವೆಸ್ಟರ್ನ್ ಕಮೋಡ್ ಸೌಲಭ್ಯವನ್ನು ಶೌಚಾಲಯದಲ್ಲಿ ಅಳವಡಿಸಲಾಗಿದೆ.
ಪ್ರವಾಸಿ ತಾಣವಾದ ಆನೆಗೊಂದಿಗೆ ಸಾಕಷ್ಟು ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ. ಅವರಿಗೆ ಶೌಚಾಯಲದ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಪಂಚಾಯಿತಿ ಅನುದಾನದಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಜನಾದೇವಿ ತಿಳಿಸಿದರು.