ಗಂಗಾವತಿ:ಅಲ್ಲಿ ಯಾವುದೇ ಮದುವೆ ಇರಲಿಲ್ಲ, ಮುಂಜಿಯೂ (ಉಪನಯನ) ಹಮ್ಮಿಕೊಂಡಿರಲಿಲ್ಲ. ಶುಭ-ಮಂಗಳ ಕಾರ್ಯವಂತೂ ಏನು ಇರಲಿಲ್ಲ. ಆದರೆ ಊರಿನ ಬೀದಿ ಬೀದಿಗಳಲ್ಲಿ ಮಂಗಳವಾದ್ಯ ಮೊಳಗಿತು.
ಮದುವೆ ಅಲ್ಲ, ಮುಂಜಿ ಇಲ್ಲ... ಆದರೂ ಮೊಳಗಿತು ಮಂಗಳವಾದ್ಯ...! - pusthaka jolige program
ಓದುವ ಬೆಳಕು ಯೋಜನೆಯಡಿ ಪುಸ್ತಕ ಜೋಳಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೇಡವಾದ ಹಾಗೂ ಮೂಲೆ ಸೇರಿದ ಪುಸ್ತಕಗಳನ್ನು ಗ್ರಾಮಸ್ಥರಿಂದ ದೇಣಿಗೆ ಪಡೆದುಕೊಳ್ಳುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಇನ್ನು ಗಂಗಾವತಿ ತಾಲೂಕಿನ ಬಸವಪಟ್ಟಣದಲ್ಲಿನ ಗ್ರಾಮಸ್ಥರು, ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚಿ, ಮಂಗಳ ವಾದ್ಯಮೇಳಗಳ ಮೂಲಕ ಸ್ವಾಗತ ನೀಡಿದರು.
![ಮದುವೆ ಅಲ್ಲ, ಮುಂಜಿ ಇಲ್ಲ... ಆದರೂ ಮೊಳಗಿತು ಮಂಗಳವಾದ್ಯ...! gangavathi](https://etvbharatimages.akamaized.net/etvbharat/prod-images/768-512-9877964-thumbnail-3x2-vid.jpg)
ತಾಲೂಕಿನ ಬಸವಪಟ್ಟಣದಲ್ಲಿನ ಗ್ರಾಮಸ್ಥರು, ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚಿ, ಮಂಗಳ ವಾದ್ಯಮೇಳಗಳೊಂದಿಗೆ ಸ್ವಾಗತ ನೀಡುವ ಮೂಲಕ ಅಚ್ಚರಿಗೆ ಕಾರಣವಾದರು. ಗ್ರಾಮೀಣ ಭಾಗದಲ್ಲಿನ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ಮತ್ತು ಗ್ರಂಥಾಲಯಗಳ ಸಬಲೀಕರಣದ ಹಿನ್ನೆಲೆ, ಓದುವ ಬೆಳಕು ಯೋಜನೆಯಡಿ ಪುಸ್ತಕ ಜೋಳಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೇಡವಾದ ಹಾಗೂ ಮೂಲೆ ಸೇರಿದ ಪುಸ್ತಕಗಳನ್ನು ಗ್ರಾಮಸ್ಥರಿಂದ ದೇಣಿಗೆ ಪಡೆದುಕೊಳ್ಳುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮಕ್ಕಳು ಹಾಗೂ ಇಲಾಖೆಯ ಅಧಿಕಾರಿಗಳು ಮನೆಮನೆಗೆ ತೆರಳಿ ಜನರಿಂದ ಪುಸ್ತಕಗಳನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಂಡು ಗ್ರಂಥಾಲಯಕ್ಕೆ ಸಲ್ಲಿಸುವ ಮೂಲಕ ಈ ಕಾರ್ಯಕ್ರಮ ನಡೆಸಿದರು. ತಾಲೂಕು ಪಂಚಾಯಿತಿ ಇಒ ಮೋಹನ್, ಪಿಡಿಒ ಇಂದಿರಾ ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.