ಕರ್ನಾಟಕ

karnataka

ETV Bharat / state

ಸಚಿವರಿಗೆ ಕೋವಿಡ್: ಅಂಜನಾದ್ರಿಯಲ್ಲಿನ ಮಹತ್ವದ ಸಭೆ ರದ್ದು - ಸಚಿವ ಕೋಟಾ ಶ್ರೀನಿವಾಸ ಪೂಜಾರಿಗೆ ಕೊರೊನಾ

ಧಾರ್ಮಿಕ ದತ್ತಿ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಅಂಜನಾದ್ರಿ ದೇಗುಲದ ಆವರಣದಲ್ಲಿ ಉದ್ದೇಶಿಸಲಾಗಿದ್ದ ಸಭೆಯನ್ನು ಮುಂದೂಡಲಾಗಿದೆ.

kota
kota

By

Published : Apr 15, 2021, 8:54 PM IST

ಗಂಗಾವತಿ (ಕೊಪ್ಪಳ):ತಾಲೂಕಿನ ಧಾರ್ಮಿಕ ಹಾಗೂ ಐತಿಹಾಸಿಕ ತಾಣ ಅಂಜನಾದ್ರಿ ದೇಗುಲದ ಸಮಗ್ರ ಅಭಿವೃದ್ಧಿ ವಿಚಾರವಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳಲು ಎ.16ರಂದು ದೇಗುಲದ ಆವರಣದಲ್ಲಿ ಉದ್ದೇಶಿಸಲಾಗಿದ್ದ ಮಹತ್ವದ ಸಭೆಯನ್ನು ಮುಂದೂಡಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಕೊಪ್ಪಳ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು, ಪ್ರವಾಸೋದ್ಯಮ, ಕೃಷಿ, ಧಾರ್ಮಿಕ ದತ್ತಿ ಇಲಾಖೆಯ ಸಚಿವರನ್ನೂಳಗೊಂಡ ಮಹತ್ವದ ಸಭೆ ಏ.16ರಂದು ನಿಗದಿಯಾಗಿತ್ತು.

ಅಂಜನಾದ್ರಿಯಲ್ಲಿನ ಮಹತ್ವದ ಸಭೆ ರದ್ದು

ಆದರೆ, ಧಾರ್ಮಿಕ ದತ್ತಿ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಸಭೆಯನ್ನು ರದ್ದು ಮಾಡಿದ್ದಾಗಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರ ಆಪ್ತ ಕಾರ್ಯದರ್ಶಿ ಸಿ.ಎನ್. ಮಂಜುನಾಥ ತಿಳಿಸಿದ್ದಾರೆ.

ಅಂಜನಾದ್ರಿಯ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ರೂಪಿಸಲು ನಿರ್ಧರಿಸಿದ್ದ ಮಾಸ್ಟರ್ ಪ್ಲಾನ್ ಹಾಗೂ ಅದಕ್ಕೆ ಅಗತ್ಯವಾಗುವ ಅನುದಾನ ಹೊಂದಾಣಿಕೆ ವಿಚಾರವಾಗಿ ಹಿರಿಯ ಸಚಿವ ಈಶ್ವರಪ್ಪ ನೇತೃತ್ವದಲ್ಲಿ ನಾನಾ ಸಚಿವರನೊಳಗೊಂಡ ಮಹತ್ವದ ಸಭೆ ಆಯೋಜಿಸಲಾಗಿತ್ತು.

ABOUT THE AUTHOR

...view details