ಗಂಗಾವತಿ: ಅಕ್ರಮವಾಗಿ ಕಲ್ಲು ಸಾಗಾಣಿಕೆ ಮಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು, ಅಧಿಕಾರಿಗಳ ತಂಡ ದಾಳಿ ನಡೆಸಿ ಮೂರು ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದೆ.
ಅಕ್ರಮ ಕಲ್ಲು ಸಾಗಾಣಿಕೆ ಮೇಲೆ ದಾಳಿ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಸಾಗಾಣಿಕೆ ಮೇಲೆ ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಇಲಾಖೆ, ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪೊಲೀಸ್ ಅಧಿಕಾರಿಗಳ ಜಂಟಿ ತಂಡಯಾಗಿ ದಾಳಿ ನಡೆಸಿದ್ದಾರೆ.
ಅಧಿಕಾರಿಗಳ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, ತೋಟದ ಕಲ್ಲು (ದ್ರಾಕ್ಷಿ ಬಳ್ಳಿ ಹಬ್ಬಿಸಲು ಬಳಸುವ ಕಲ್ಲು)ಗಳನ್ನು ವಶಕ್ಕೆ ಪಡೆಯಲಾಗಿದೆ.
ಲಾರಿ ಮಾಲೀಕರಾದ ಶಂಕ್ರಪ್ಪ ಆರ್.ಹುನುಗುಂದ ಎಂಬುವವರಿಗೆ ಎರಡು ಲಾರಿಗಳು ಸೇರಿದ್ದು, ಮತ್ತೊಂದು ಲಾರಿಯು ಬಸವನ ದುರ್ಗದ ಅಕ್ಬರ್ ಎಂಬುವವರಿಗೆ ಸೇರಿದೆ. ಈ ಸಂಬಂಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಶಕ್ಕೆ ಪಡೆದ ಲಾರಿಗಳಲ್ಲಿ ಒಂದು ಮಹಾರಾಷ್ಟ್ರದ ನೋಂದಣಿ ಹೊಂದಿದ್ದು, ಮತ್ತೊಂದು ಲಾರಿಯು ನೆರೆಯ ಆಂಧ್ರ ಪ್ರದೇಶದ ಪರವಾನಿಗೆ ಪಡೆದಿದೆ. ಇನ್ನೊಂದು ಲಾರಿ ಕರ್ನಾಟಕದ ಬೆಳಗಾವಿ ಜಿಲ್ಲೆಯ ನೋಂದಣಿ ಹೊಂದಿದೆ.