ಗಂಗಾವತಿ:ವಿಶ್ವ ಪರಂಪರೆಯ ಯುನೆಸ್ಕೋ ಪಟ್ಟಿಯಲ್ಲಿರುವ ಸಂರಕ್ಷಿತ ಹಂಪಿ ಮಹಾಯೋಜನೆಯ ಪ್ರದೇಶದಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹಂಪಿಯ ಜೊತೆಗೆ ಆನೆಗೊಂದಿ ಸುತ್ತಲಿನ ಹನ್ನೊಂದು ಗ್ರಾಮಗಳನ್ನು ಹಂಪಿ ಮಹಾ ಯೋಜನೆಯಲ್ಲಿ ಗುರುತಿಸಿದ್ದು, ಯುನೆಸ್ಕೋ ಷರತ್ತಿನ ಹಿನ್ನೆಲೆ ಈ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೂ ಹಂಪಿ ಅಭಿವೃದ್ದಿ ಪ್ರಾಧಿಕಾರ ತಡೆಯೊಡ್ಡಿದೆ. ಆದರೆ ಆನೆಗೊಂದಿ ಹೋಬಳಿಯ ಕಡೆಬಾಗಿಲು, ರಂಗಾಪುರ, ಜಂಗ್ಲಿ, ಮಲ್ಲಾಪುರ, ಸಂಗಾಪುರ ಮೊದಲಾದ ಗ್ರಾಮಗಳಲ್ಲಿ ಕೆಲವರು ಅಕ್ರಮವಾಗಿ ಐತಿಹಾಸಿಕ ಬೆಟ್ಟದ ಪ್ರದೇಶದಲ್ಲಿ ಅತಿಕ್ರಮ ಪ್ರವೇಶ ಪಡೆದು ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ.