ಗಂಗಾವತಿ: ತಾಲ್ಲೂಕಿನ ಮಲ್ಲಾಪುರ ಗ್ರಾಮದಿಂದ ಅಕ್ರಮವಾಗಿ ಪಡಿತರವನ್ನು ಫಲಾನುಭವಿಗಳಿಂದ ಸಂಗ್ರಹಿಸಿ ಕಾಳ ಸಂತೆಗೆ ಮಾರಾಟ ಮಾಡಲು ತರಲಾಗಿದ್ದ ವಾಹನವನ್ನು ಸಾರ್ವಜನಿಕರು ಹಿಡಿದು ಇಲಾಖೆಗೆ ಒಪ್ಪಿಸಿದರೂ ಪ್ರಕರಣ ದಾಖಲಾಗದ ಘಟನೆ ನಡೆದಿದೆ.
ಅಕ್ರಮ ಪಡಿತರ ಅಕ್ಕಿ ಸಾಗಾಟ: ಹಿಡಿದು ಕೊಟ್ಟರೂ ಕ್ರಮ ಕೈಗೊಳ್ಳದ ಆಹಾರ ಇಲಾಖೆ... - gangavathi
ಮಲ್ಲಾಪುರ ಗ್ರಾಮದಿಂದ ಅಕ್ರಮವಾಗಿ ಪಡಿತರ ಫಲಾನುಭವಿಗಳಿಂದ ಸಂಗ್ರಹಿಸಿ ಕಾಳ ಸಂತೆಗೆ ಮಾರಾಟ ಮಾಡಲು ತರಲಾಗಿದ್ದ ವಾಹನವನ್ನು ಸಾರ್ವಜನಿಕರು ಹಿಡಿದು ಇಲಾಖೆಗೆ ಒಪ್ಪಿಸಿದರೂ ಪ್ರಕರಣ ದಾಖಲಾಗದ ಘಟನೆ ನಡೆದಿದೆ.
ತಾಲ್ಲೂಕಿನ ಮಲ್ಲಾಪುರ, ಕಡೆಬಾಗಿಲು ಮತ್ತಿತರ ಗ್ರಾಮಗಳಿಂದ ಕೆಲ ವ್ಯಕ್ತಿಗಳು ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿಕೊಂಡು ನಗರದ ಕಾಳ ಸಂತೆಗೆ ಮಾರಾಟ ಮಾಡಲು ಆಟೋ ಮೂಲಕ ತರುತ್ತಿರುವಾಗ ಆಕಸ್ಮಿಕ ಜನರ ಕೈಗೆ ಸಿಕ್ಕಿದ್ದಾರೆ. ಈ ಬಗ್ಗೆ ಸ್ಥಳೀಯ ಕೆಲ ಯುವಕರು ಆಟೋ ಸಹಿತ ವಾಹನದಲ್ಲಿದ್ದ ಅಕ್ಕಿ ಮೂಟೆಗಳ ಚಿತ್ರ ತೆಗೆದು ತಹಶೀಲ್ದಾರ್ ಕವಿತಾ ಅವರ ಮೊಬೈಲ್ಗೆ ರವಾನಿಸಿದ್ದಾರೆ. ಕ್ರಮ ಕೈಗೊಳ್ಳುತ್ತೇನೆ ಎಂದು ಅಧಿಕಾರಿ ದೂರು ನೀಡಿದ ಯುವಕರಿಗೆ ತಿಳಿಸಿದ್ದಾರೆ.
ಆದರೆ ಒಂದು ದಿನ ಕಳೆದರೂ ಯಾವುದೇ ಪ್ರಕರಣ ದಾಖಲಾಗದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಠಾಣೆಯ ಪಿಐ ವೆಂಕಟಸ್ವಾಮಿ, ಸಂಬಂಧಿತ ಇಲಾಖೆಯ ಯಾವೊಬ್ಬರೂ ದೂರು ನೀಡದ ಹಿನ್ನೆಲೆ ಪ್ರಕರಣ ದಾಖಲಾಗಿಲ್ಲ ಎಂದರು.