ಗಂಗಾವತಿ: ತಾಲೂಕಿನ ಹಿರೇಜಂತಕ್ಕಲ್ ಪ್ರದೇಶದ ವಿನೋಬನಗರದ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಸಂದರ್ಭದಲ್ಲಿ ದಾಳಿ ಮಾಡಿದ ಗ್ರಾಮೀಣ ಪೊಲೀಸರು ಎರಡು ಟ್ರ್ಯಾಕ್ಟರ್ ವಶಕ್ಕೆ ಪಡೆದಿದ್ದಾರೆ.
ಅಕ್ರಮ ಮರಳು ಸಾಗಾಣಿಕೆ : ವಾಹನ ಸಮೇತ ಮರಳು ವಶಕ್ಕೆ - Latest News in Gangavati
ತಾಲೂಕಿನ ಹಿರೇಜಂತಕ್ಕಲ್ ಪ್ರದೇಶದ ವಿನೋಬನಗರದ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಸಂದರ್ಭದಲ್ಲಿ ದಾಳಿ ಮಾಡಿದ ಗ್ರಾಮೀಣ ಪೊಲೀಸರು ಎರಡು ಟ್ರ್ಯಾಕ್ಟರ್ ವಶಕ್ಕೆ ಪಡೆದಿದ್ದಾರೆ.
ಅಕ್ರಮ ಮರಳು ಸಾಗಾಣಿಕೆ
ಅಕ್ರಮವಾಗಿ ಮರಳು ಸಾಗಿಸಲಾಗುತ್ತದೆ ಎಂಬ ಖಚಿತ ಮಾಹಿತಿ ಮೆರೆಗೆ ದಾಳಿ ಮಾಡಿದ ಪೊಲೀಸರು, ಟ್ರ್ಯಾಕ್ಟರ್ ಚಾಲಕರು ವಾಹನಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಮರಳು ಸಮೇತ ಟ್ರ್ಯಾಕ್ಟರ್ಗಳನ್ನು ಠಾಣೆಗೆ ತಂದ ಪೊಲೀಸರು, ದೂರು ದಾಖಲಿಸಿಕೊಂಡಿದ್ದಾರೆ. ಈ ಪೈಕಿ ಒಂದು ವಾಹನಕ್ಕೆ ಟ್ರಾಲಿಯ ನಂಬರ್ ಇಲ್ಲದೇ ಅಕ್ರಮವಾಗಿ ಮರಳು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.