ಕರ್ನಾಟಕ

karnataka

ETV Bharat / state

ಪಟೇಲ್​ರ ಜನ್ಮದಿನಾಚರಣೆ ಅಂಗವಾಗಿ ವಿವಿಧೆಡೆ ಪೊಲೀಸ್ ಇಲಾಖೆಯಿಂದ ಐಕ್ಯತಾ ಓಟ - ಏಕತೆಯಲ್ಲಿ ಅನೇಕತೆ ಎನ್ನುವ ಸಂದೇಶ

ಸರ್ದಾರ್ ವಲ್ಲಭಾಯಿ ಪಟೇಲ್​ರ ಜನ್ಮದಿನಾಚರಣೆ ಹಿನ್ನಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪೊಲೀಸ್ ಇಲಾಖೆಯಿಂದ ಐಕ್ಯತಾ ಓಟ ನಡೆಸಲಾಯಿತು.

ಐಕ್ಯತಾ ಓಟ

By

Published : Oct 31, 2019, 1:25 PM IST

ರಾಯಚೂರು/ಚಾಮರಾಜನಗರ/ಕೊಪ್ಪಳ:ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲ್ ರ ಜನ್ಮದಿನಾಚರಣೆ ಹಿನ್ನಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಪೊಲೀಸ್ ಇಲಾಖೆಯಿಂದ ಐಕ್ಯತಾ ಓಟ ನಡೆಸಲಾಯಿತು.

ನಗರದ ಸರ್ದಾರ ವಲ್ಲಭಾಯಿ ಪಟೇಲ್ ವೃತ್ತದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಐಕ್ಯತಾ ಓಟ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ನೇತೃತ್ವದಲ್ಲಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ನಾಗರಿಕರು ಓಟದಲ್ಲಿ ಭಾಗವಹಿಸಿದರು.

ಇನ್ನು ಚಾಮರಾಜನಗರ ಜಿಲ್ಲೆಯ ಪೊಲೀಸರು ರಾಷ್ಟೀಯ ಐಕ್ಯತೆಗಾಗಿ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಆರಂಭವಾದ ಐಕ್ಯತಾ ಓಟವು ರಾಮಸಮುದ್ರದ ಅಂಬೇಡ್ಕರ್ ಪ್ರತಿಮೆ ಬಳಿ ಅಂತ್ಯಗೊಂಡಿತು. ಇನ್ನು, ಓಟಕ್ಕೆ ಎಎಸ್ಪಿ ಅನಿತಾ ಹದ್ದನವರ್ ಹಸಿರು ನಿಶಾನೆ ತೋರಿದರು.

ಪೊಲೀಸ್ ಇಲಾಖೆಯಿಂದ ಐಕ್ಯತಾ ಓಟ

ಕೊಪ್ಪಳ ನಗರದ ಗವಿಮಠದ ಆವರಣದಿಂದ ಐಕ್ಯತಾ ನಡಿಗೆಗೆ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸೇರಿದಂತೆ ಅಧಿಕಾರಿಗಳು ಹಸಿರು ನಿಶಾನೆ ತೋರಿಸಿದರು. ಬಸವೇಶ್ವರ ಸರ್ಕಲ್, ಅಶೋಕ ಸರ್ಕಲ್ ಮೂಲಕ ಜವಾಹರ ರಸ್ತೆಯಲ್ಲಿ ಸಾಗಿ ಗಡಿಯಾರ ಕಂಬ ವೃತ್ತದ ಮೂಲಕ ಮತ್ತೆ ಐಕ್ಯತಾ ನಡಿಗೆ ಗವಿಮಠದ ಆವರಣದಲ್ಲಿ ಮುಕ್ತಾಯಗೊಂಡಿತು.

ABOUT THE AUTHOR

...view details