ಕೊಪ್ಪಳ: ರಾಜ್ಯಸಭಾ ಸ್ಥಾನಕ್ಕೆ ಬಿಜೆಪಿ ಪಕ್ಷ ತಮಗೆ ಟಿಕೆಟ್ ನೀಡಿರುವುದು ಪಕ್ಷದ ಕಾರ್ಯಕರ್ತರಿಗೆ ನೀಡಿರುವ ಗೌರವ ಎಂದು ಬಿಜೆಪಿ ನಿಯೋಜಿತ ಅಭ್ಯರ್ಥಿ ಅಶೋಕ್ ಗಸ್ತಿ ಹೇಳಿದ್ದಾರೆ.
ನಾನು ಯಾವತ್ತೂ ಟಿಕೆಟ್ ಕೇಳಿಲ್ಲ, ಇದು ಪಕ್ಷದ ನಿರ್ಣಯ: ಅಶೋಕ್ ಗಸ್ತಿ - ಕೊಪ್ಪಳ ರಾಜಕೀಯ ಸುದ್ದಿ
ಇಂದಿನ ಬೆಳವಣಿಗೆ ನನ್ನ ಗಮನಕ್ಕೆ ಬಂದಿರಲಿಲ್ಲ. ಕಳೆದ 30 ವರ್ಷಗಳಿಂದ ಬೂತ್ ಮಟ್ಟದಿಂದ ಕೆಲಸ ಮಾಡಿಕೊಂಡು ಬಂದಿರುವ ಪಕ್ಷದ ಕಾರ್ಯಕರ್ತ ನಾನು. ರಾಜ್ಯಸಭಾ ಚುನಾವಣೆಗೆ ನನಗೆ ಟಿಕೆಟ್ ನೀಡಿರುವುದು ಪಕ್ಷದ ನಿರ್ಣಯ. ನಾನು ಯಾವತ್ತೂ ಏನೂ ಕೇಳಿಲ್ಲ. ನಾನು ಯಾವುದನ್ನೂ ಬಯಸಿಲ್ಲ. ಪಕ್ಷ ಏನು ಕೆಲಸ ಕೊಟ್ಟಿದೆಯೋ ಅದನ್ನು ಮಾತ್ರ ಮಾಡಿಕೊಂಡು ಬಂದಿದ್ದೇನೆ. ನನಗೆ ಪಕ್ಷ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಎಂದು ಗಸ್ತಿ ತಿಳಿಸಿದ್ದಾರೆ.
ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನೊಬ್ಬ ಬಿಜೆಪಿ ಕಾರ್ಯಕರ್ತ. ಇಂದಿನ ಬೆಳವಣಿಗೆ ನನ್ನ ಗಮನಕ್ಕೆ ಬಂದಿರಲಿಲ್ಲ. ಕಳೆದ 30 ವರ್ಷಗಳಿಂದ ಬೂತ್ ಮಟ್ಟದಿಂದ ಕೆಲಸ ಮಾಡಿಕೊಂಡು ಬಂದಿರುವ ಪಕ್ಷದ ಕಾರ್ಯಕರ್ತ ನಾನು. ರಾಜ್ಯಸಭಾ ಚುನಾವಣೆಗೆ ನನಗೆ ಟಿಕೆಟ್ ನೀಡಿರುವುದು ಪಕ್ಷದ ನಿರ್ಣಯ. ನಾನು ಯಾವತ್ತೂ ಏನೂ ಕೇಳಿಲ್ಲ. ನಾನು ಯಾವುದನ್ನೂ ಬಯಸಿಲ್ಲ. ಪಕ್ಷ ಏನು ಕೆಲಸ ಕೊಟ್ಟಿದೆಯೋ ಅದನ್ನು ಮಾತ್ರ ಮಾಡಿಕೊಂಡು ಬಂದಿದ್ದೇನೆ. ನನಗೆ ಪಕ್ಷ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಎಂದು ಗಸ್ತಿ ತಿಳಿಸಿದ್ದಾರೆ.
ಪಕ್ಷದ ನಿರ್ಣಯ ಕಾರ್ಯಕರ್ತರಿಗೆ ಸಲ್ಲುವ ಗೌರವ. ಪಕ್ಷ ಕಾರ್ಯಕರ್ತರನ್ನು ಗುರುತಿಸಿರುವುದು ಸಂತೋಷ ತಂದಿದೆ ಎಂದು ಅಶೋಕ್ ಗಸ್ತಿ ಹೇಳಿದ್ದಾರೆ. ಕಾರಟಗಿಯಿಂದ ಅವರು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.