ಕೊಪ್ಪಳ:ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಹೇಳಿದ ಕೆಲಸ ಮಾಡುವುದು ನಮ್ಮ ಧರ್ಮ. ನನಗೆ ಸಚಿವ ಸ್ಥಾನ ಕೊಡಿ ಎಂದು ಕೇಳಿಲ್ಲ. ಆದರೆ, ನಮ್ಮ ಜಿಲ್ಲೆಗೆ ಸಚಿವ ಸ್ಥಾನ ಕೊಡಿ ಎಂದು ಕೇಳಿದ್ದೇನೆ ಎಂದು ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಹೇಳಿದ್ದಾರೆ.
ಶಾಸಕ ಹಾಲಪ್ಪ ಆಚಾರ್ ಸಚಿವ ಸ್ಥಾನ ಆಕಾಂಕ್ಷಿ ಅಲ್ವಂತೆ.. ಆದರೆ,, - ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್
ನಾನು ಸೇರಿ ಉತ್ತರ ಕರ್ನಾಟಕದ ಶಾಸಕರು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೇವೆ. ಭೇಟಿ ಮಾಡಿದವರೆಲ್ಲರೂ ಸಚಿವ ಸ್ಥಾನ ಕೇಳಲು ಹೋದವರಲ್ಲ. ಜನರು ನನ್ನನ್ನು ಶಾಸಕನ್ನಾಗಿ ಮಾಡಿದ್ದಾರೆ. ಮಂತ್ರಿಯಾಗ್ತೀರಾ ಎಂದು ಕೇಳಿದರೆ ನಾನು ಏನು ಹೇಳಬೇಕು ಅಂತಾ ಕೇಳುವ ಮೂಲಕ ಪರೋಕ್ಷವಾಗಿ ಸಚಿವ ಸ್ಥಾನದ ಆಕಾಂಕ್ಷಿ ಅನ್ನೋದನ್ನ ಒಪ್ಪಿಕೊಂಡರು.
ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಕ್ಷದವರು ನನ್ನನ್ನು ಸಚಿವರನ್ನಾಗಿ ಮಾಡಿ ಎಂದು ಹೇಳಿರಬಹುದು. ನಾನು ಸೇರಿ ಉತ್ತರ ಕರ್ನಾಟಕದ ಶಾಸಕರು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೇವೆ. ಭೇಟಿ ಮಾಡಿದವರೆಲ್ಲರೂ ಸಚಿವ ಸ್ಥಾನ ಕೇಳಲು ಹೋದವರಲ್ಲ. ಜನರು ನನ್ನನ್ನು ಶಾಸಕನ್ನಾಗಿ ಮಾಡಿದ್ದಾರೆ. ಮಂತ್ರಿಯಾಗ್ತೀರಾ ಎಂದು ಕೇಳಿದರೆ ನಾನು ಏನು ಹೇಳಬೇಕು ಅಂತಾ ಕೇಳುವ ಮೂಲಕ ಪರೋಕ್ಷವಾಗಿ ಸಚಿವ ಸ್ಥಾನದ ಆಕಾಂಕ್ಷಿ ಅನ್ನೋದನ್ನ ಒಪ್ಪಿಕೊಂಡರು.
ಈವರೆಗೆ ಪಕ್ಷ ಹೊರಿಸಿದ ಎಲ್ಲ ಜವಾಬ್ದಾರಿಯನ್ನು ಹೊತ್ತುಕೊಂಡಿರುವೆ. ಪಕ್ಷ ಸಚಿವ ಸ್ಥಾನದ ಜವಾಬ್ದಾರಿ ಹೋರಿಸಿದರೆ ಅದನ್ನೂ ಹೊರುವೆ. ನನ್ನ ಜೀವನದಲ್ಲಿ ಯಾವ ಅಧಿಕಾರವನ್ನೂ ಕೇಳಿ ತೆಗೆದುಕೊಂಡಿಲ್ಲ. ನನಗೆ ಸಚಿವ ಸ್ಥಾನ ಕೊಡಿ ಎಂದು ಕೇಳಿಲ್ಲ. ನನಗಿಂತ ಹಿರಿಯ ಶಾಸಕರು ಅನೇಕರು ಕ್ಯೂನಲ್ಲಿದ್ದಾರೆ. ಆದರೆ, ನಮ್ಮ ಜಿಲ್ಲೆಗೆ ಸಚಿವ ಸ್ಥಾನ ಕೊಡಿ ಎಂದು ಕೇಳಿದ್ದೇನೆ ಎಂದರು.