ಕೊಪ್ಪಳ:ರಾಜ್ಯದಲ್ಲಿನ ಪ್ರತಿಭಟನೆಗೆ ನಾನು ಕಾರಣನಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ನಾನು ಕಾರಣ ಅಲ್ಲ: ಯು.ಟಿ.ಖಾದರ್ - ಯು.ಟಿ.ಖಾದರ್ ಹೇಳಿಕೆ
ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ನಾನು ಕಾರಣನಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
![ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ನಾನು ಕಾರಣ ಅಲ್ಲ: ಯು.ಟಿ.ಖಾದರ್ U.T Khadar](https://etvbharatimages.akamaized.net/etvbharat/prod-images/768-512-5425444-thumbnail-3x2-net.jpg)
ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಮಾತನಾಡಿದ ಅವರು, ಪ್ರತಿಭಟನೆಗೆ ನಾನು ಕಾರಣವಲ್ಲ. ಜನರ ಭಾವನೆಗಳನ್ನು ನಾನು ಸಿಎಂ ಗಮನಕ್ಕೆ ತಂದಿದ್ದೇನೆ. ನೆರೆ ರಾಜ್ಯಗಳಲ್ಲಿ ಆಗುತ್ತಿರುವ ಪ್ರತಿಭಟನೆಯನ್ನು ನೋಡಿ ನಾನೊಬ್ಬ ಜನ ಪ್ರತಿನಿಧಿಯಾಗಿ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದೇನೆ ಎಂದರು.
ರಾಜ್ಯದಲ್ಲಿ ಏನೂ ಇಲ್ಲ ಅಂದರೆ ನಿಷೇಧಾಜ್ಞೆ ಯಾಕೆ ಜಾರಿ ಮಾಡಿದರು ಎಂದು ಪ್ರಶ್ನಿಸಿದ ಅವರು, ಉತ್ತರ ಭಾರತದಲ್ಲಿ ಯಾರಾದ್ರೂ ಪ್ರತಿಭಟನೆ ಮಾಡಲು ಹೇಳಿದ್ದರಾ? ಅಲ್ಲಿನ ವಾತಾವರಣವನ್ನು ಗಮನಿಸಿ ನಾನು ಮಾತಾಡಿದ್ದೇನೆ. ನಾನು ಕರ್ನಾಟಕ ಹೊತ್ತಿ ಉರಿಯುತ್ತೆ ಎಂದು ಹೇಳಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.