ಕರ್ನಾಟಕ

karnataka

ETV Bharat / state

ಹೈಬ್ರಿಡ್ ಟೊಮೇಟೊಂದಿಗೆ ಸಮರಕ್ಕಿಳಿದ ಜವಾರಿ ಚೆರ್ರಿ... ದರವೂ ಕಡಿಮೆ -ಹುಳಿಯೂ ಹೆಚ್ಚು

ಸ್ಥಳೀಯವಾಗಿ ಹೈಬ್ರಿಡ್ ಟೊಮೇಟೊ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯದಿದ್ದರಿಂದ ಸಹಜವಾಗಿ ವ್ಯಾಪಾರಿಗಳು, ಬೇಡಿಕೆಗನುಗುಣವಾಗಿ ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ಟೊಮೇಟೊ ಆಮದು ಮಾಡಿಕೊಳ್ಳುತ್ತಿದ್ದಾರೆ.

ಹೈಬ್ರಿಡ್ ಟೊಮೆಟೊಂದಿಗೆ ಸಮರಕ್ಕಿಳಿದ ಜವಾರಿ ಚೆರ್ರಿ ಟೊಮೆಟೊ
ಹೈಬ್ರಿಡ್ ಟೊಮೆಟೊಂದಿಗೆ ಸಮರಕ್ಕಿಳಿದ ಜವಾರಿ ಚೆರ್ರಿ ಟೊಮೆಟೊ

By

Published : Jul 13, 2020, 2:17 PM IST

ಗಂಗಾವತಿ: ಮಾರುಕಟ್ಟೆಯಲ್ಲಿ ಟೊಮೇಟೊ ಬೆಲೆ ಕೇಳಿಯೇ ಗ್ರಾಹಕರು ಸುಸ್ತಾಗುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ಟೊಮೇಟೊ ಬೆಲೆ ಗಗನಕ್ಕೇರಿದ್ದು, ಕೆಳಕ್ಕಿಳಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದೀಗ ಈ ಹೈಬ್ರಿಡ್ ಟೊಮೇಟೊಗೆ ಸೆಡ್ಡು ಹೊಡೆಯಲು ಜವಾರಿ ಚೆರ್ರಿ ಟೊಮೇಟೊ ಮಾರುಕಟ್ಟೆಗೆ ಬಂದಿದೆ.

ಸ್ಥಳೀಯವಾಗಿ ಹೈಬ್ರಿಡ್ ಟೊಮೇಟೊ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯದಿದ್ದರಿಂದ ಸಹಜವಾಗಿ ವ್ಯಾಪಾರಿಗಳು, ಬೇಡಿಕೆಗನುಗುಣವಾಗಿ ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ಟೊಮೇಟೊವನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ.

ಹೈಬ್ರಿಡ್ ಟೊಮೇಟೊಂದಿಗೆ ಸಮರಕ್ಕಿಳಿದ ಜವಾರಿ ಚೆರ್ರಿ ಟೊಮೇಟೊ

ಆದರೆ, ಆಮದಾಗಿ ಬರುತ್ತಿರುವ ಟೊಮೇಟೊ ಬೆಲೆ ಕೆಜಿಗೆ 60 ರಿಂದ 70 ರೂಪಾಯಿ ಧಾರಣೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆ ಇದೀಗ ಸ್ಥಳೀಯ ಮಾರುಕಟ್ಟೆಗೆ ಹೈಬ್ರಿಡ್ ಟೊಮೇಟೊಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಸ್ಥಳೀಯವಾಗಿಯೇ ಬೆಳೆದ ಚೆರ್ರಿ ಟೊಮೇಟೊ ಮಾರುಕಟ್ಟೆಗೆ ಬಂದಿದೆ.

ಹೆಸರೇ ಸೂಚಿಸುವಂತೆ ಈ ಜವಾರಿ ಟೊಮೇಟೊ ಚೆರ್ರಿ ಮಾದರಿ ಅಂದರೆ ಸಣ್ಣದಾಗಿದ್ದು, ಕೆಜಿಗೆ 80 ಕ್ಕೂ ಹೆಚ್ಚು ಟೊಮೇಟೊ ಹಣ್ಣು ಸಿಗುತ್ತವೆ. ಅಲ್ಲದೇ ಕೆಜಿಗೆ ಕೇವಲ 30 ರಿಂದ 40 ರೂಪಾಯಿಗೆ ಇದ್ದು, ಹೈಬ್ರಿಡ್ ಟೊಮೇಟೊಗೆ ಹೋಲಿಸಿದರೆ ಜವಾರಿ ಹೆಚ್ಚು ಹುಳಿಯಾಗಿದ್ದು, ಗ್ರಾಹಕರನ್ನು ಸೆಳೆಯುತ್ತಿದೆ.

ABOUT THE AUTHOR

...view details