ಕೊಪ್ಪಳ: ಪಂಚಾಯತಿಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡಿ, ಮಹಿಳೆಯರೂ ಆಡಳಿತದಲ್ಲಿ ಪಾಲ್ಗೊಳ್ಳುವಂತೆ ಕಾನೂನು ರಚಿಸಿ ಜಾರಿಗೆ ತರಲಾಗಿತ್ತು. ಆದ್ರೆ, ಈ ಕಾನೂನು ಉಲ್ಲಂಘನೆಯಾಗುತ್ತಿದ್ದು, ಬಹುತೇಕ ಕಡೆಗಳಲ್ಲಿ ಮಹಿಳೆಯರ ಅಧಿಕಾರಗಳನ್ನು ಅವರ ಪತಿಯಂದಿರೇ ನಿಭಾಯಿಸುತ್ತಿದ್ದಾರೆ. ಕೊಪ್ಪಳ ಜಿಲ್ಲಾ ಪಂಚಾಯತಿ ಇದಕ್ಕೆ ಹೊಸ ಸೇರ್ಪಡೆ.
ಪತ್ನಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ, ಸಭೆಗೆ ಹಾಜರಾಗುತ್ತಿರುವುದು ಪತಿರಾಯ! - undefined
ಕೊಪ್ಪಳ ಜಿಲ್ಲಾ ಪಂಚಾಯತಿಯ ಉಪಾಧ್ಯಕ್ಷೆ ರತ್ನವ್ವ ನಗರ ಅವರ ಬದಲಾಗಿ ಅವ್ರ ಪತಿಯೇ ಎಲ್ಲಾ ಅಧಿಕಾರವನ್ನು ಚಲಾಯಿಸುತ್ತಿದ್ದಾರೆ.
ನಗರದ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಕಚೇರಿಯಲ್ಲಿ ಜಿ.ಪಂ. ಅಧ್ಯಕ್ಷ ವಿಶ್ವನಾಥ ರೆಡ್ಡಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಈ ಸಭೆಗೆ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ರತ್ನವ್ವ ನಗರ ಬರಬೇಕಿತ್ತು. ಆದ್ರೆ, ಅವರ ಪತಿ ಭರಮಪ್ಪ ನಗರ ಹಾಜರಾಗಿದ್ದರು. ಈ ಮೂಲಕ ಪತ್ನಿಯ ಅಧಿಕಾರವನ್ನು ಪತಿಯೇ ಚಲಾಯಿಸುತ್ತಿದ್ದಾರೆ. ಭರಮಪ್ಪ ನಗರ ಸಭೆಯಲ್ಲಿ ಹಾಜರಾಗಿದ್ರೂ ಸ್ವತಃ ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿಶ್ವನಾಥ ರೆಡ್ಡಿಯಾಗಲಿ ಅಥವಾ ಅಧಿಕಾರಿಗಳಾಗಲೀ ಯಾರೂ ಆಕ್ಷೇಪಿಸಲಿಲ್ಲ.
ಹಾಗಾಗಿ ಸ್ಥಳೀಯ ಪಂಚಾಯತ್‌ಗಳಲ್ಲಿ ಮಹಿಳೆಯರ ರಾಜಕೀಯ ಸಬಲೀಕರಣಕ್ಕೆ ತಂದ ಮೀಸಲಾತಿ ವ್ಯವಸ್ಥೆ ಅರ್ಥಕಳೆದುಕೊಳ್ಳುತ್ತಿದೆ.