ಕರ್ನಾಟಕ

karnataka

ETV Bharat / state

ಗಂಗಾವತಿಯಲ್ಲಿ ಶಿಕ್ಷಣ ಸಚಿವರು... ದೂರು ನೀಡಲು ಮುಗಿಬಿದ್ದ ಶಿಕ್ಷಕ ವೃಂದ!

ಗಂಗಾವತಿಗೆ ಆಗಮಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಚಿವ ಸುರೇಶ್ ​ಕುಮಾರ್​ ಅವರಿಗೆ ಶಿಕ್ಷಕ ವಲಯದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ನೂರಾರು ಮನವಿ ಸಲ್ಲಿಸಿದರು.

ಸುರೇಶ್ ​ಕುಮಾರ್​

By

Published : Sep 14, 2019, 12:35 PM IST

ಗಂಗಾವತಿ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಸುರೇಶ್ ​ಕುಮಾರ್​ ಅವರಿಗೆ ಶಿಕ್ಷಕ ವಲಯದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ನೂರಾರು ಮನವಿ ನೀಡಿದರು.

ಶಿಕ್ಷಣ ಸಚಿವರಿಗೆ ಶಿಕ್ಷಕ ವಲಯದ ಕಂಪ್ಲೈಂಟ್​ಗಳ ಮಹಾಪೂರ !

ಪದವೀಧರ ನಿರುದ್ಯೋಗಿ ಶಿಕ್ಷಕರ ಸಂಘ, ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಅನುದಾನಿತ, ಅನುದಾನ ರಹಿತ ಶಿಕ್ಷಕರ ಸಂಘ ಹೀಗೆ ನಾನಾ ಸಂಘಟನೆಗಳು ತಮ್ಮ ಸಮಸ್ಯೆಗಳ ದೂರು ಸಲ್ಲಿಸಿದರು.

ವಯೋಮಿತಿ ಮೀರುತ್ತಿದ್ದರೂ ನೇಮಕಾತಿ ನಡೆಯುತ್ತಿಲ್ಲವೆಂದು, ನೇಮಕಾತಿ ಆಗಿದ್ದರೂ ಆದೇಶ ಸಿಕ್ಕಿಲ್ಲ, ಕಳೆದ ನಾಲ್ಕಾರು ತಿಂಗಳಿಂದ ವೇತನ ಸಿಕ್ಕಿಲ್ಲ ಎಂದು ಕೆಲವರು ಮನವಿಗಳ ಮೂಲಕ ಸಚಿವರ ಗಮನ ಸೆಳೆದರು.

ABOUT THE AUTHOR

...view details