ಕರ್ನಾಟಕ

karnataka

ETV Bharat / state

ಹಸಿದವರಿಗೆ ನಿತ್ಯ`ಕೈ ತುತ್ತು' ನೀಡಿ ವ್ಯಕ್ತಿಯಿಂದ ಮಾನವೀಯ ಕಾರ್ಯ - ಹಸಿದವರಿಗೆ ಊಟ ವಿತರಿಸುವ ವ್ಯಕ್ತಿ

ಕೋವಿಡ್ ಕರ್ಫ್ಯೂ ಕಾರಣದಿಂದ ನಗರ ಪ್ರದೇಶಗಳ ರಸ್ತೆ ಬದಿಗಳಲ್ಲಿ ವಾಸಿಸುವ ಬಡ, ನಿರ್ಗತಿಕ ಜನರು ತುತ್ತು ಅನ್ನಕ್ಕೆ ಪರದಾಡುತ್ತಿದ್ದಾರೆ. ಇಂತವರ ನೆರವಿಗೆ ಧಾವಿಸಿರುವ ವ್ಯಕ್ತಿಯೊಬ್ಬ ನಿತ್ಯ ಊಟ ವಿತರಿಸುವ ಕಾರ್ಯ ಮಾಡುತ್ತಿದ್ದಾರೆ.

Humanitarian work by a man in Ganagavati
ಗಂಗಾವತಿಯ ವ್ಯಕ್ತಿಯಿಂದ ಮಾನವೀಯ ಕಾರ್ಯ

By

Published : May 4, 2021, 9:23 AM IST

ಗಂಗಾವತಿ :ಕೋವಿಡ್​ ಕರ್ಫ್ಯೂ ನಡುವೆ ಆಹಾರಕ್ಕಾಗಿ ಪರದಾಡುವ ಬಡ, ನಿರ್ಗತಿಕರಿಗೆ ಪ್ರತಿನಿತ್ಯಊಟ ವಿತರಿಸುವ ಮೂಲಕ ನಗರದ ವ್ಯಕ್ತಿಯೊಬ್ಬ ಮಾನವೀಯ ಕಾರ್ಯ ಮಾಡುತ್ತಿದ್ದಾರೆ.

ನಗರದ ಸ್ನೇಹಜೀವಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ವಿಜಯ ಕುಮಾರ ಗದ್ದಿ`ಕೈ ತುತ್ತು' ಎಂಬ ಹೆಸರಿನಡಿ ಪ್ರತಿನಿತ್ಯ ಬಡ ಜನರಿಗೆ ಅನ್ನದ ಪ್ಯಾಕೇಟ್​ ವಿತರಿಸಿ ಅವರ ಹಸಿವು ನೀಗಿಸುವ ಮೂಲಕ ಮಾನವೀಯತೆ ತೋರುತ್ತಿದ್ದಾರೆ.

ಹಸಿದವರಿಗೆ ಊಟ ವಿತರಿಸುತ್ತಿರುವ ವಿಜಯ ಕುಮಾರ ಗದ್ದಿ

ಓದಿ : ಪೊಲೀಸರು ಸೇರಿ 600 ಮಂದಿಗೆ ಅನ್ನದಾನ ಮಾಡಿದ ಬಂಟ್ವಾಳದ ಯುವಕರ ಬಳಗ

ವೃತ್ತಿಯಲ್ಲಿ ಡ್ರೈವಿಂಗ್ ಶಾಲೆ ನಡೆಸುವ ಹಾಗೂ ಆಸಕ್ತಿ ಇರುವವರಿಗೆ ವಾಹನ ಡ್ರೈವಿಂಗ್ ಕಲಿಸಿ ಕೊಡುವ ವಿಜಯ ಕುಮಾರ ಗದ್ದಿ, ಕರ್ಫ್ಯೂ ಆರಂಭವಾದಾಗಿನಿಂದ ಗಂಗಾವತಿ ನಗರ ಹಾಗೂ ಕನಕಗಿರಿಯಲ್ಲಿ ಸುಮಾರು 100 ಜನರಿಗೆ ನಿತ್ಯ ಮಧ್ಯಾಹ್ನ ಹಾಗೂ ರಾತ್ರಿಯ ಊಟ ನೀಡುತ್ತಿದ್ದಾರೆ. ಗದ್ದಿ ಅವರ ಈ ಮಾನವೀಯ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ABOUT THE AUTHOR

...view details