ಗಂಗಾವತಿ(ಕೊಪ್ಪಳ): ಕನಕಗಿರಿ ತಾಲ್ಲೂಕಿನ ಹುಲಿಹೈದರ ಗ್ರಾಮದಲ್ಲಿ ಮೂರು ತಿಂಗಳ ಹಿಂದೆ ನಡೆದಿದ್ದ ಕೋಮು ಘರ್ಷಣೆ ಪ್ರಕರಣದಲ್ಲಿ ತನ್ನನ್ನು ಸೇರಿಸಿ ಜೈಲಿಗಟ್ಟಬಹುದು ಎಂದು ಭೀತಿಗೊಳಗಾಗಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ.
ನಗರದ ಬಸವಣ್ಣ ವೃತ್ತದ ಮುದ್ಗಲ್ ಓಣಿಯ ಶಿಲ್ಪಾ ಹಿರೇಮಠ ಎಂಬುವವರ ಮನೆಯಲ್ಲಿ ಯುವಕ ನೇಣಿಗೆ ಶರಣಾಗಿದ್ದು, ಯುವಕನನ್ನು ಹುಲಿಹೈದರ ಗ್ರಾಮದ ನಾಗರಾಜ ಹನುಮಂತಪ್ಪ ಗದ್ದಿ (25) ಎಂದು ಗುರುತಿಸಲಾಗಿದೆ.