ಕೊಪ್ಪಳ:ಐತಿಹಾಸಿಕ ಹುಲಗಿ ದೇವಸ್ಥಾನದಲ್ಲಿ 'ವಿಶ್ವರೂಪಿಣಿ ಹುಲಗೆಮ್ಮ' ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದಾಗ ಸಹ ನೃತ್ಯಗಾರ್ತಿ ಪೂಜಾ ಮೈಮೇಲೆ ಹುಲಗೆಮ್ಮ ದೇವಿ ಬಂದಿರುವ ಘಟನೆ ನಡೆಯಿತು. ಹಾಡಿನ ಶೂಟಿಂಗ್ ಸಂದರ್ಭದಲ್ಲಿ ಕೊರಿಯೋಗ್ರಾಫರ್ ಮದನ್ ಎಂಬಾತ ಶೂ ಹಾಕಿಕೊಂಡು ಭಂಡಾರ ತುಳಿದಿದ್ದಾನೆ. ಆಗ ನೃತ್ಯಗಾರ್ತಿ ಪೂಜಾ ಮೈಮೇಲೆ ಬಂದ ಹುಲಗೆಮ್ಮ ದೇವಿ, ಶೂ ಹಾಕಿ ಭಂಡಾರ ತುಳೀಬೇಡಿ ಎಂದು ಕಿರುಚಿದ್ದಾಳೆ. ಸಿನೆಮಾ ತಂಡ ಚಿತ್ರೀಕರಣ ಸ್ಥಗಿತಗೊಳಿಸಿ ದೇವಿಗೆ ಪೂಜೆ ಸಲ್ಲಿಸಿದರು. ಪ್ರಿಯಾಂಕಾ ಉಪೇಂದ್ರ ನಟಿಸುತ್ತಿರುವ ಸಿನೆಮಾವನ್ನು ಓಂ ಸಾಯಿ ಪ್ರಕಾಶ ನಿರ್ದೇಶಿಸುತ್ತಿದ್ದಾರೆ.
ಸಿನೆಮಾ ಹಾಡಿನ ಚಿತ್ರೀಕರಣ ವೇಳೆ ಸಹ ನೃತ್ಯಗಾರ್ತಿ ಮೈಮೇಲೆ ಬಂದ ಹುಲಗೆಮ್ಮ - Etv Bharat Kannada news
ವಿಶ್ವರೂಪಿಣಿ ಹುಲಗೆಮ್ಮ ಸಿನೆಮಾದ ಹಾಡಿನ ಚಿತ್ರೀಕರಣದ ಸಂದರ್ಭದಲ್ಲಿ ಸಹನೃತ್ಯಗಾರ್ತಿ ಮೈ ಮೇಲೆ ಹುಲಿಗೆಮ್ಮ ದೇವಿ ಬಂದಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಸಿನೆಮಾ ಹಾಡಿನ ಚಿತ್ರೀಕರಣ ವೇಳೆ ಸಹ ನೃತ್ಯಗಾರ್ತಿ ಮೈ ಮೇಲೆ ಬಂದ ಹುಲಗೆಮ್ಮ ದೇವಿ