ಕರ್ನಾಟಕ

karnataka

ETV Bharat / state

ರಾಜ್ಯ ಹೆದ್ದಾರಿ ಬದಿಯಲ್ಲೇ ಬೃಹತ್ ವಾಹನಗಳ ಪಾರ್ಕಿಂಗ್.. ಸಾರ್ವಜನಿಕರ ಓಡಾಟಕ್ಕೆ ತೊಂದರೆ.. - ರಾಯಚೂರು-ಗಂಗಾವತಿ ರಾಜ್ಯ ಹೆದ್ದಾರಿ

ಇಂದಿರಾ ವೃತ್ತದಲ್ಲಿನ ರಾಯಚೂರು-ಗಂಗಾವತಿ ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಖಾಸಗಿ ವ್ಯಕ್ತಿಗಳು ಬೃಹತ್ ವಾಹನಗಳನ್ನು ನಿಲ್ಲಿಸುತ್ತಿರುವುದು ಸಾರ್ವಜನಿಕರ ಓಡಾಟಕ್ಕೆ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗಿ ಪರಿಣಮಿಸಿದೆ.

ಬೃಹತ್ ವಾಹನಗಳ ಪಾರ್ಕಿಂಗ್

By

Published : Sep 18, 2019, 12:35 PM IST

ಗಂಗಾವತಿ: ಇಲ್ಲಿನ ಇಂದಿರಾ ವೃತ್ತದಲ್ಲಿನ ರಾಯಚೂರು-ಗಂಗಾವತಿ ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಖಾಸಗಿ ವ್ಯಕ್ತಿಗಳು ಬೃಹತ್ ವಾಹನಗಳನ್ನು ನಿಲ್ಲಿಸುತ್ತಿರುವುದು ಸಾರ್ವಜನಿಕರ ಓಡಾಟಕ್ಕೆ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗಿ ಪರಿಣಮಿಸಿದೆ.

ರಾಜ್ಯ ಹೆದ್ದಾರಿ ಬದಿಯಲ್ಲೇ ಬೃಹತ್ ವಾಹನಗಳ ಪಾರ್ಕಿಂಗ್..​

ಮುಖ್ಯರಸ್ತೆಗೆ ಹೊಂದಿಕೊಂಡಂತೆ ರಿಲಾಯನ್ಸ್ ಪೆಟ್ರೋಲ್ ಬಂಕ್ ಮುಂದಿರುವ ಸ್ಥಳದಲ್ಲಿ ನಿತ್ಯ ಹತ್ತಾರು ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಸಾರ್ವಜನಿಕ ವಾಹನಗಳ ಓಡಾಟಕ್ಕೆ ರಸ್ತೆ ಇಕ್ಕಟ್ಟಾಗುತ್ತಿದೆ. ಜೆಸಿಬಿ, ಕ್ರೇನ್, ಕಾಂಕ್ರೀಟ್ ಮಿಕ್ಸರ್​ನಂತ ದೊಡ್ಡ ಗಾತ್ರದ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಲಾಗುತ್ತಿದೆ. ಖಾಸಗಿ ವ್ಯಕ್ತಿಗಳು ಈ ವಾಹನಗಳನ್ನು ಗಂಟೆಗೆ ಇಂತಿಷ್ಟು ಎಂದು ಬಾಡಿಗೆ ಆಧಾರದಲ್ಲಿ ಕೊಡುತ್ತಾರೆ. ಮರಳು ಸಂಗ್ರಹಿಸಲು, ಕಟ್ಟಡ ನಿರ್ಮಾಣ, ಭಾರಿ ಗಾತ್ರದ ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬದಲಿಸಲು ಈ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.

ಇನ್ನು, ಖಾಸಗಿ ಸ್ಥಳದ ಬದಲಿಗೆ ವಾಹನಗಳ ಮಾಲೀಕರು ತಮ್ಮ ಸ್ವಂತ ಸ್ಥಳಕ್ಕೆ ವಾಹನಗಳನ್ನು ನಿಲ್ಲಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ABOUT THE AUTHOR

...view details