ಗಂಗಾವತಿ: ಇಲ್ಲಿನ ತಾಲ್ಲೂಕು ಪಂಚಾಯಿತಿ ಇಒ ಹುದ್ದೆಗೆ ಅಧಿಕಾರಿಗಳನ್ನು ನಿಯೋಜಿಸುವ ಸಂಬಂಧ ವಿವಾದ ಏರ್ಪಟ್ಟಿದೆ. ಈ ಬಗ್ಗೆ ಸ್ಪಷ್ಟನೆ ಕೋರಿ ಜಿಲ್ಲಾ ಪಂಚಾಯಿತಿ ಸಿಇಒ ರಘುನಂದನ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಪಶು ವೈದ್ಯನಿಗೆ ಇಒ ಹುದ್ದೆ ಹೇಗೆ ಸಾಧ್ಯ?... ಸರ್ಕಾರಕ್ಕೆ ಸ್ಪಷ್ಟೀಕರಣ ಕೇಳಿದ ಜಿಪಂ ಸಿಇಒ! - ZP CEO,
ತಾಲ್ಲೂಕು ಪಂಚಾಯಿತಿ ಇಒ ಹುದ್ದೆಗೆ ಅಧಿಕಾರಿಗಳನ್ನು ನಿಯೋಜಿಸುವ ಸಂಬಂಧ ವಿವಾದ ಏರ್ಪಟ್ಟಿದ್ದು, ಇದೀಗ ಸ್ಪಷ್ಟನೆ ಕೋರಿ ಜಿಲ್ಲಾ ಪಂಚಾಯಿತಿ ಸಿಇಒ ರಘುನಂದನ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಪ್ರಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಿಮ್ಮಾನಾಯ್ಕ್ ಸ್ಥಳದಲ್ಲಿ ಯಲಬುರ್ಗಾ ತಾ.ಪಂ. ಪ್ರಭಾರಿ ಇಒ ಡಾ.ಡಿ. ಮೋಹನ್ ಅವರನ್ನು ನಿಯೋಜಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶ ನೀಡಿತ್ತು. ಆದರೆ ಮೋಹನ್ ಅವರು ಪಶುಪಾಲನಾ ಇಲಾಖೆಯ ಕೊಪ್ಪಳ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಾತ್ಕಾಲಿಕ ಪ್ರಭಾರಿಯಾಗಿ ಯಲಬುರ್ಗಾಕ್ಕೆ ನಿಯೋಜಿಸಲಾಗಿತ್ತು. ಇದೀಗ ಮುಂದುವರೆದು ಗಂಗಾವತಿಗೂ ಪ್ರಭಾರ ವಹಿಸುವಂತೆ ಪಂಚಾಯತ್ ರಾಜ್ ಇಲಾಖೆ ಆದೇಶಿಸಿದೆ.
ಮೂಲತಃ ಮೋಹನ್ ಪಶುಪಾಲನಾ ಇಲಾಖೆಯಲ್ಲಿದ್ದರಿಂದ ಇವರ ಸೇವೆ ಪಂಚಾಯತ್ ರಾಜ್ ಇಲಾಖೆಯಲ್ಲಿ ಇಲ್ಲದ್ದರಿಂದ ಯಲಬುರ್ಗಾ ತಾ.ಪಂನಿಂದ ಬಿಡುಗಡೆ ಮಾಡಿ ಗಂಗಾವತಿಯ ತಾ.ಪಂ ಇಒ ಎಂದು ಅಧಿಕಾರ ವಹಿಸಿಕೊಳ್ಳಲು ನಿರ್ದೇಶನ ನೀಡುವಂತೆ ಜಿಪಂ ಸಿಇಒ ಕೋರಿದ್ದಾರೆ. ಇದು ಈಗ ವಿವಾದಕ್ಕೆ ಕಾರಣವಾಗಿದೆ.