ಕರ್ನಾಟಕ

karnataka

ETV Bharat / state

ಗಂಗಾವತಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಮನೆ ಭಸ್ಮ.. - ಕಾರಟಗಿ ತಾಲೂಕಿನ ಮೈಲಾಪುರ

ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಆಹಾರ ಧಾನ್ಯ, ಬಟ್ಟೆ ಸೇರಿದಂತೆ ಸುಮಾರು 7 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ ಎಂದು ಅಂದಾಜಿಸಲಾಗಿದೆ.

ಗಂಗಾವತಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಮನೆ ಭಸ್ಮ

By

Published : Sep 24, 2019, 5:14 PM IST

ಗಂಗಾವತಿ: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಇಡೀ ಮನೆ ಭಸ್ಮವಾಗಿರುವ ಘಟನೆ ಕಾರಟಗಿ ತಾಲೂಕಿನ ಮೈಲಾಪುರದಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ.

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಗೋವಿಂದಪ್ಪ ಉಪ್ಪಾರ ಎಂಬುವರ ಮನೆಯಲ್ಲಿ ಈ ಅವಘಡನ ನಡೆದಿದೆ. ಮನೆಯವರೆಲ್ಲಾ ಜಮೀನಿಗೆ ಕೆಲಸಕ್ಕೆಂದು ಹೋಗಿದ್ದಾಗ ಸಿಲಿಂಡರ್‌ ಸ್ಫೋಟಗೊಂಡಿದ್ದರಿಂದಾಗಿ ಭಾರಿ ದುರಂತವೊಂದು ತಪ್ಪಿದಂತಾಗಿದೆ.

ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆ ಭಸ್ಮವಾಗಿ..

ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಆಹಾರ ಧಾನ್ಯ, ಬಟ್ಟೆ ಸೇರಿದಂತೆ ಸುಮಾರು 7 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ ಎಂದು ಅಂದಾಜಿಸಲಾಗಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಲಿ ಹೆಚ್ಚಿನ ಅನಾಹುತವಾಗುವುದನ್ನ ತಪ್ಪಿಸಿದ್ದಾರೆ.

ABOUT THE AUTHOR

...view details