ಗಂಗಾವತಿ: ಹನುಮ ಜಯಂತಿ ಅಂಗವಾಗಿ ತಾಲೂಕಿನ ಅಂಜನಾದ್ರಿ ದೇಗುಲದಲ್ಲಿ ಮಂಗಳವಾರ ನಡೆಯುವ ಧಾರ್ಮಿಕ ಕಾರ್ಯಕ್ರಮ ಸಂದರ್ಭದಲ್ಲಿ ಅಯೋಧ್ಯೆಯಿಂದ ತರಲಾದ ವಿಶೇಷ ವಸ್ತ್ರ ಹಾಗೂ ಪ್ರಸಾದವನ್ನು ಸಮರ್ಪಿಸಲಾಗುವುದು ಎಂದು ಹನುಮಾನ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಸ್ವಾಮಿ ಗೋವಿಂದಾನಂದ ಸರಸ್ವತಿ ಹೇಳಿದರು.
ಅಯೋಧ್ಯೆಯ ಪ್ರಸಾದ-ವಸ್ತ್ರ ಅಂಜನಾದ್ರಿ ದೇಗುಲದಲ್ಲಿ ಸಮರ್ಪಣೆ - ಗಂಗಾವತಿ
ಅಯೋಧ್ಯೆಯಿಂದ ತರಲಾದ ವಿಶೇಷ ವಸ್ತ್ರ ಹಾಗೂ ಪ್ರಸಾದವನ್ನು ಅಂಜನಾದ್ರಿ ದೇಗುಲದಲ್ಲಿ ಸಮರ್ಪಿಸಲಾಗುವುದು ಎಂದು ಹನುಮಾನ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಸ್ವಾಮಿ ಗೋವಿಂದಾನಂದ ಸರಸ್ವತಿ ಹೇಳಿದರು.
ಅಂಜನಾದ್ರಿ ದೇಗುಲ
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನ ಭಕ್ತ ಹನುಮನಿಗಾಗಿಯೇ ಅಯೋಧ್ಯೆಯಲ್ಲಿ ರಾಮಜನ್ಮ ಭೂಮಿಗೆ ಶಿಲಾನ್ಯಾಸ ಏರ್ಪಡುವ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಅಲ್ಲಿಂದ ತರಲಾದ ವಿಶೇಷ ಪ್ರಸಾದ ರೂಪದ ವಸ್ತ್ರ, ಯಜ್ಞೋಪವಿತ ಹಾಗೂ ಆಹಾರ ರೂಪದ ಪ್ರಸಾದವನ್ನು ಹನುಮನಿಗೆ ಸಮರ್ಪಿಸಿ ಬಳಿಕ ಭಕ್ತರಿಗೆ ನೀಡುವ ಉದ್ದೇಶಕ್ಕೆ ಮಂಗಳವಾರ ಬೆಳಗ್ಗೆ ಪ್ರಸಾದವನ್ನು ನೀಡಲಾಗುವುದು ಎಂದರು.