ಕೊಪ್ಪಳ: ತಾಲೂಕಿನ ಐತಿಹಾಸಿಕ ಹುಲಗೆಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಮಲಗಿದ್ದವರ ಮೇಲೆ ವಾಹನ ಹರಿದಿದೆ. ಅಪಘಾತದಲ್ಲಿ ಬಳ್ಳಾರಿಯ ಸಿರಗುಪ್ಪದ ತಿಪ್ಪಣ್ಣ (75) ಮೃತಪಟ್ಟಿದ್ದಾರೆ. ಕುಕನೂರಿನ ಗಾವರಾಳದ ಹನುಮವ್ವ, ಶಿರಗುಪ್ಪಾದ ಮಲ್ಲವ್ವ ಹಾಗೂ ತುಕಾರಾಂ ಗಾಯಗೊಂಡಿದ್ದಾರೆ.
ಕೊಪ್ಪಳ: ದೇವಸ್ಥಾನದ ಆವರಣದಲ್ಲಿ ಮಲಗಿದ್ದ ಭಕ್ತರ ಮೇಲೆ ಹರಿದ ವಾಹನ - CCTV VIDEO - ಹುಲಿಗೆಮ್ಮ ದೇವಿ ಭಕ್ತರ ಮೇಲೆ ಹರಿದ ವಾಹನ
ದೇವಿ ದರ್ಶನಕ್ಕೆ ಬಂದವರ ಮೇಲೆ ವಾಹನ ಹರಿದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
CCTV VIDEO
ದೇವಿಯ ದರ್ಶನಕ್ಕೆ ಬಂದಿದ್ದ ಇವರು ದೇವಸ್ಥಾನದ ಆವರಣದಲ್ಲಿದ್ದ ಬಳೆ ಅಂಗಡಿ ಮುಂದೆ ಮಲಗಿದ್ದರು. ಈ ವೇಳೆ, ಚಾಲಕನ ನಿಯಂತ್ರಣ ತಪ್ಪಿ ಅಶೋಕ ಲೈಲ್ಯಾಂಡ್ ವಾಹನ ಮೈಮೇಲೆ ಬರುತ್ತಲೇ ಕೆಲವರು ಎದ್ದು ಓಡಿ ಹೋಗಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಕರಣ ಬಳಿಕ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಇದನ್ನೂ ಓದಿ: ಶಿರಾ ಬಳಿ 40 ಜನರಿದ್ದ ಬಸ್ನ ಆಕ್ಸೆಲ್ ಕಟ್.. ಹೀರೋ ಆದ ಡ್ರೈವರ್!)