ಕೊಪ್ಪಳ: ಹಿಜಾಬ್-ಕೇಸರಿ ಶಾಲು ವಿವಾದದ ನಡುವೆ, ಮುಸ್ಲಿಂ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ಇಡೀ ಗ್ರಾಮಸ್ಥರು ಭಾಗಿಯಾಗಿ ಭಾವೈಕ್ಯತೆ ಮೆರೆದ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ತಳಬಾಳ ಗ್ರಾಮದಲ್ಲಿ ನಡೆದಿದೆ.
ಮುಸ್ಲಿಂ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ಹಿಂದೂ ಸಂಪ್ರದಾಯ ಆಚರಣೆ ಮುಸ್ಲಿಂ ಸಮುದಾಯದ ಹುಸೇನ್ ಸಾಬ್ ನೂರ್ಭಾಷಾ ಅವರ ಅಂತ್ಯ ಸಂಸ್ಕಾರದ ವೇಳೆ ಹಿಂದೂ ಧಾರ್ಮಿಕ ಆಚರಣೆಗೂ ಅವಕಾಶ ನೀಡಿ ಭಾವೈಕ್ಯತೆ ಮೆರೆಯಲಾಗಿದೆ.
ಮೃತ ವ್ಯಕ್ತಿ ಹುಸೇನ್ ಸಾಬ್ ನೂರ್ಭಾಷಾ ಇದನ್ನೂ ಓದಿ:ಅಪರೂಪದ ಪಕ್ಷಿಪ್ರೇಮ: ಮೃತ ಗುಬ್ಬಚ್ಚಿ ತಿಥಿ ಮಾಡಿ, ಶ್ರದ್ಧಾಂಜಲಿ
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ತಳಬಾಳ ಗ್ರಾಮದಲ್ಲಿ ನಾಟಿ ವೈದ್ಯರಾಗಿದ್ದ ಹುಸೇನ್ ಸಾಬ್ ನೂರ್ಭಾಷಾ ಅವರು ಫೆಬ್ರವರಿ 6ರಂದು ಮೃತಪಟ್ಟಿದ್ದರು. ಈ ಹಿನ್ನೆಲೆ, ಗ್ರಾಮಸ್ಥರು ಇಡೀ ರಾತ್ರಿ ಭಜನೆ ಮಾಡಿ, ಭಾವೈಕ್ಯತೆ ಮೆರೆದರು. ಅಲ್ಲದೇ ಅಂತ್ಯ ಸಂಸ್ಕಾರದ ವೇಳೆ ಪೂಜೆ ಸಲ್ಲಿಸಿ, ಮಂಗಳಾರತಿ ಮಾಡಿದರು. ಈ ಮೂಲಕ ಹುಸೇನ್ಸಾಬ್ ಅವರ ಅಂತ್ಯಸಂಸ್ಕಾರ ಭಾವೈಕ್ಯತೆಗೆ ಸಾಕ್ಷಿಯಾಯಿತು..