ಕರ್ನಾಟಕ

karnataka

ETV Bharat / state

ಕೊಪ್ಪಳದಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ ಭಾಂದವರಿಂದ ಸೌಹಾರ್ದ ಯುಗಾದಿ ಆಚರಣೆ - ಕೊಪ್ಪಳದಲ್ಲಿ ಸೌಹಾರ್ದ ಯುಗಾದಿ ಆಚರಣೆಯಲ್ಲಿ ಪರಸ್ಪರ ಬೇವು ಬೆಲ್ಲ ಸವಿದ ಹಿಂದು ಮುಸ್ಲಿಂ ಕ್ರೈಸ್ತರು

ಜೀವಪರ, ಜನಪರ ಸಂಘಟನೆಗಳು, ಸೌಹಾರ್ದ ವೇದಿಕೆಯಿಂದ ನಗರದ ತಾಲೂಕು ಕ್ರೀಡಾಂಗಣದಲ್ಲಿ ಸೌಹಾರ್ದ ಯುಗಾದಿ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಮತಸ್ಥರು ಪರಸ್ಪರ ಬೇವು ಬೆಲ್ಲ ಹಂಚಿಕೊಂಡು ಯುಗಾದಿ ಆಚರಣೆ ಮಾಡಿದರು.

ಹಿಂದು, ಮುಸ್ಲಿಂ, ಕ್ರೈಸ್ತ ಭಾಂದವರಿಂದ ಸೌಹಾರ್ದ ಯುಗಾದಿ ಆಚರಣೆ
ಹಿಂದು, ಮುಸ್ಲಿಂ, ಕ್ರೈಸ್ತ ಭಾಂದವರಿಂದ ಸೌಹಾರ್ದ ಯುಗಾದಿ ಆಚರಣೆ

By

Published : Apr 2, 2022, 3:13 PM IST

Updated : Apr 2, 2022, 3:43 PM IST

ಕೊಪ್ಪಳ:ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಭಾರತದಲ್ಲಿ ಎಲ್ಲರೂ ಒಂದಾಗಿರಬೇಕು ಎಂಬ ಸಂದೇಶ ಸಾರುವ ನಿಟ್ಟಿನಲ್ಲಿ, ನಗರದಲ್ಲಿ ಸೌಹಾರ್ದ ಯುಗಾದಿ ಆಚರಿಸಲಾಯಿತು. ಜೀವಪರ, ಜನಪರ ಸಂಘಟನೆಗಳು, ಸೌಹಾರ್ದ ವೇದಿಕೆಯಿಂದ ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಈ ಸೌಹಾರ್ದ ಯುಗಾದಿ ಆಚರಣೆಯಲ್ಲಿ ಪರಸ್ಪರ ಬೇವು ಬೆಲ್ಲ ಹಂಚಿ ಸಂಭ್ರಮಿಸಿದರು ಕಾರ್ಯಕ್ರಮದಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಮತಸ್ಥರು ಪರಸ್ಪರ ಬೇವು ಬೆಲ್ಲ ಹಂಚಿಕೊಂಡು ಯುಗಾದಿ ಆಚರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಪ್ರಾಚಾರ್ಯ ಹಾಗೂ ಹಿರಿಯ ಬಂಡಾಯ ಸಾಹಿತಿ ಪ್ರೋ. ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಭಾರತ ಎಲ್ಲ ಮತಗಳ ಜನರು ಇರುವ ದೇಶ. ಇಂತಹ ವಿಭಿನ್ನ ಸಂಸ್ಕೃತಿಗಳ, ಆಚರಣೆಗಳಿರುವ ಜನಗಳು ಇರುವ ದೇಶದಲ್ಲಿ ಈ ಹಿಂದೆ ಧರ್ಮ, ಧರ್ಮಗಳ ಜನರ ನಡುವೆ ಸಾಮರಸ್ಯವಿತ್ತು. ಆದರೆ, ಈಗ ರಾಜಕಾರಣಕ್ಕಾಗಿ ಜನರ ಮಧ್ಯ ಧರ್ಮದ ವಿಷ ಬೀಜ ಬಿತ್ತಲಾಗುತ್ತಿದೆ. ಹೀಗಾಗಿ ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಮನುಜ ಮತ ನಮ್ಮದಾಗಬೇಕು. ಹೀಗಾಗಿ ಸರ್ವರೂ ಸಾಮರಸ್ಯದಿಂದ ಇರಬೇಕು ಎಂದು ಕರೆ ನೀಡಿದರು.

ಹಿಂದು, ಮುಸ್ಲಿಂ, ಕ್ರೈಸ್ತ ಭಾಂದವರಿಂದ ಸೌಹಾರ್ದ ಯುಗಾದಿ ಆಚರಣೆ

ಇದನ್ನೂ ಓದಿ : ನಾಡಿನಾದ್ಯಂತ ಯುಗಾದಿ ಸಂಭ್ರಮ: ಬೆಂಗಳೂರಿನ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಸಮುದಾಯದ ಮುಖಂಡ ಸಯ್ಯದ್ ಹೈದರ ಅಲಿ ಮಾತನಾಡಿ, ದೇವನೊಬ್ಬ ನಾಮ ಹಲವು. ದೇಶವಾಸಿಗಳಾಗಿರುವ ನಾವೆಲ್ಲ ಸಹೋದರತ್ವ. ಸಾಮರಸ್ಯದಿಂದ ಬದುಕಬೇಕು ಎಂದರು. ಹಿಂದು, ಮುಸ್ಲಿಂ, ಕ್ರೈಸ್ತ ಸಮುದಾಯದ ಮುಖಂಡರು ಕಾರ್ಯಮದಲ್ಲಿ ಪಾಲ್ಗೊಂಡಿದ್ದರು.

Last Updated : Apr 2, 2022, 3:43 PM IST

For All Latest Updates

TAGGED:

ABOUT THE AUTHOR

...view details