ಕರ್ನಾಟಕ

karnataka

ETV Bharat / state

ಗ್ರಾ.ಪಂ ಚುನಾವಣೆ: ಅಖಾಡಕ್ಕಿಳಿದ ಮಂಗಳಮುಖಿ - ಗ್ರಾ.ಪಂ ಚುನಾವಣೆ

ಸಾಮಾನ್ಯ ಮಹಿಳಾ ಕ್ಷೇತ್ರಕ್ಕೆ ಮೀಸಲಾದ ಕಾರಟಗಿ ತಾಲೂಕಿನ ಬೆನ್ನೂರು ಗ್ರಾಮ ಪಂಚಾಯಿತಿ 9ನೇ ವಾರ್ಡ್​ನಿಂದ ಮಂಗಳಮುಖಿವೋರ್ವರು ಸ್ಪರ್ಧೆಗಿಳಿದಿದ್ದಾರೆ.

Hijra contested the GP election
ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸಿದ ಮಂಗಳಮುಖಿ

By

Published : Dec 24, 2020, 2:00 PM IST

ಗಂಗಾವತಿ:ಸಾಮಾನ್ಯ ಮಹಿಳಾ ಕ್ಷೇತ್ರಕ್ಕೆ ಮೀಸಲಾದ ಕಾರಟಗಿ ತಾಲ್ಲೂಕಿನ ಬೆನ್ನೂರು ಗ್ರಾಮ ಪಂಚಾಯಿತಿ 9ನೇ ವಾರ್ಡ್​ನಿಂದ ಮಂಗಳಮುಖಿ ಜಮುನಾ ಅಖಾಡಕ್ಕೆ ಇಳಿದಿದ್ದಾರೆ.

ಮಂಗಳಮುಖಿ ಜಮುನಾ ಮತಯಾಚನೆ

ಸಹದ್ಯೋಗಿ ಜಮುನಾ ಪರವಾಗಿ ಮಂಗಳಮುಖಿಯರ ಸಮೂಹ ಪ್ರಚಾರಕ್ಕಿಳಿದಿದ್ದು, ತಾಲೂಕಿನ ಗಮನ ಸೆಳೆದಿದೆ. ಗಂಗಾವತಿ, ಕಾರಟಗಿ, ಸೇರಿದಂತೆ ನಾನಾ ಭಾಗದಲ್ಲಿರುವ ಮಂಗಳಮುಖಿಯರು ಆಗಮಿಸಿ ಪ್ರಚಾರ ಮಾಡುತ್ತಿದ್ದಾರೆ. ಮಂಗಳಮುಖಿಯರ ಗುಂಪು, ಮತದಾರರ ಮನೆಮನೆಗೆ ತೆರಳಿ ಮಹಿಳೆಯರಿಗೆ ಅರಿಶಿಣ, ಕುಂಕುಮ ನೀಡಿ ಜಮುನಾಗೆ ಮತ ನೀಡುವಂತೆ ಮಹಿಳೆಯರ ಮನವೊಲಿಸುವಲ್ಲಿ ನಿರತವಾಗಿದೆ.

ಓದಿ: ಗ್ರಾ.ಪಂ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮಂಗಳಮುಖಿ

ಮಂಗಳಮುಖಿ ಜುಮುನಾ ಸ್ಪರ್ಧಿಸಿರುವ ಕ್ಷೇತ್ರಕ್ಕೆ ಇನ್ನಿಬ್ಬರು ಮಹಿಳೆಯರು ಸ್ಪರ್ಧಿಸಿದ್ದಾರೆ.

ABOUT THE AUTHOR

...view details