ಗಂಗಾವತಿ:ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮ ಪಂಚಾಯಿತಿಯ ತಮ್ಮ ಪಕ್ಷದ ಬೆಂಬಲಿತ ಸದಸ್ಯನೊಬ್ಬ ಹೈಜಾಕ್ ಆಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಆರೋಪಿಸಿದ ಬೆನ್ನಲ್ಲೇ ಅದೇ ವ್ಯಕ್ತಿ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾದ ಘಟನೆ ನಡೆದಿದೆ.
ಗ್ರಾಪಂ ಉಪಾಧ್ಯಕ್ಷ ಸ್ಥಾನಕ್ಕೆ ಹೈಜಾಕ್ ಆದ ಅಭ್ಯರ್ಥಿ ಅವಿರೋಧ ಆಯ್ಕೆ - ಜಂಗಮರ ಕಲ್ಗುಡಿ ಗ್ರಾಮ ಪಂಚಾಯಿತಿ
ಅಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೆ ಮೀಸಲಾದ ಹಿನ್ನೆಲೆ ಲಕ್ಷ್ಮಿ ಯಮನೂರಪ್ಪ ನಾಯಕ್ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ ಸಿಂದ್ಲಿ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆ ಅವಿರೋಧ ಆಯ್ಕೆಯಾದರು.
ಅಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೆ ಮೀಸಲಾದ ಹಿನ್ನೆಲೆ ಲಕ್ಷ್ಮಿ ಯಮನೂರಪ್ಪ ನಾಯಕ್ ಅವಿರೋಧ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ ಸಿಂದ್ಲಿ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆ ಅವಿರೋಧ ಆಯ್ಕೆಯಾದರು.
ಪಂಚಾಯಿತಿಯಲ್ಲಿ ಅಧ್ಯಕ್ಷೆ ಕಾಂಗ್ರೆಸ್ ಹಾಗೂ ಉಪಾಧ್ಯಕ್ಷ ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದಾರೆ. ಒಂದೊಮ್ಮೆ ಚುನಾವಣೆ ನಡೆದರೆ ಉಪಾಧ್ಯಕ್ಷನನ್ನು ಬೆಂಬಲಿಸಲು ಒಂಭತ್ತು ಜನ ಸದಸ್ಯರು ಸಿದ್ಧರಿದ್ದರು ಎಂದು ಬಿಜೆಪಿ ಮುಖಂಡ ಆನಂದ್ ರಾವ್ ತಿಳಿಸಿದರು.
ಚಂದ್ರಶೇಖರ್ಗೆ ಚುನಾವಣೆಯ ಸಂದರ್ಭದಲ್ಲಿ ಕೆಲ ಕಾಂಗ್ರೆಸ್ ನಾಯಕರು ಬೆಂಬಲಿಸಿದ್ದರು. ಆದರೆ ಕಳೆದ ಡಿಸಂಬರ್ 30ರಂದೇ ಅವರು ಶಾಸಕ ಬಸವರಾಜ ದಡೇಸಗೂರು ನೇತೃತ್ವದಲ್ಲಿ ಪಕ್ಷಕ್ಕೆ ಸೇರಿದ್ದರು ಎಂದು ಆನಂದ್ರಾವ್ ಸ್ಪಷ್ಟಪಡಿಸಿದ್ದಾರೆ.