ಕೊಪ್ಪಳ: ಹಿಜಾಬ್ ಮತ್ತು ಕೇಸರಿ ಶಾಲು ನಡುವಿನ ಗಲಾಟೆ ತಾರಕಕ್ಕೇರಿದೆ. ಈ ವಿವಾದದ ಬಗ್ಗೆ ಹೈಕೋರ್ಟ್ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ರಾಜ್ಯದ ಹಲವು ಜಿಲ್ಲೆಯಲ್ಲಿ ಸಂಘರ್ಷ ನಡೆಯುತ್ತಿರುವುದರಿಂದ ಕೊಪ್ಪಳದಲ್ಲಿ ಯಾವುದೇ ಗಲಾಟೆ ನಡೆಯದೆ ಇದ್ದರೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಹಿಜಾಬ್ ವಿವಾದ: ಕೊಪ್ಪಳದಲ್ಲಿ ಪೊಲೀಸರಿಂದ ಪಥ ಸಂಚಲನ - police march for safegaurd of the people
ಹಿಜಾಬ್ ಮತ್ತು ಕೇಸರಿ ಫೈಟ್ ರಾಜ್ಯದ ಹಲವೆಡೆ ಹರಡಿದ್ದು ಕೊಪ್ಪಳದಲ್ಲಿ ಯಾವುದೇ ಗಲಾಟೆಗಳು ನಡೆಯದಿದ್ದರೂ ಮುಂಜಾಗ್ರತಾ ಕ್ರಮವಾಗಿ ಇಂದು ಬೆಳಿಗ್ಗೆ ನಗರದಲ್ಲಿ ಪೊಲೀಸರಿಂದ ಪಥ ಸಂಚಲನ ನಡೆಯಿತು.
ಕೊಪ್ಪಳದಲ್ಲಿ ಪೊಲೀಸರಿಂದ ಪಥಸಂಚಲನ
ಈ ನಿಟ್ಟಿನಲ್ಲಿ ಇಂದು ಬೆಳಿಗ್ಗೆ ನಗರದಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು. ನಗರದ ಕೇಂದ್ರೀಯ ಬಸ್ ನಿಲ್ದಾಣದಿಂದ ಪಥ ಸಂಚಲನ ಆರಂಭಿಸಿದ ಪೊಲೀಸರು ನಗರದ ವಿವಿಧ ರಸ್ತೆಗಳಲ್ಲಿ ಮಾರ್ಚ್ ನಡೆಸಿದರು. ಕೊಪ್ಪಳ ಡಿವೈಎಸ್ಪಿ ಗೀತಾ ಬೇನಾಳ ನೇತೃತ್ವದಲ್ಲಿ ಪೊಲೀಸರ ಪಥ ಸಂಚಲನ ಸಾಗಿತು.
ಇದನ್ನೂ ಓದಿ:ಜಾತಿ ಜನಗಣತಿಯನ್ನು ಸುಪ್ರೀಂಕೋರ್ಟ್ ಒಪ್ಪಿಕೊಳ್ಳುವ ಭರವಸೆ ಇದೆ: ಸಿದ್ದರಾಮಯ್ಯ