ಕರ್ನಾಟಕ

karnataka

ETV Bharat / state

ಚುನಾವಣೆ ಘೋಷಣೆಗೂ ಮುನ್ನವೇ ಅಖಾಡಕ್ಕಿಳಿದ ‘ಹೇರೂರು ಮೋದಿ’.. - ಜಿಲ್ಲಾ ಪಂಚಾಯಿತಿ ಚುನಾವಣೆ

ನಾನಾ ಗ್ರಾಮಗಳಲ್ಲಿ ಯುವಕರ ಪಡೆ ಕಟ್ಟಿಕೊಂಡು, ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಕ್ಷೇತ್ರಕ್ಕೆ ಇನ್ನೂ ಮೀಸಲಾತಿ ಪ್ರಕಟವಾಗಿಲ್ಲ. ಮಹಿಳೆ ಬಂದರೆ ತನ್ನ ಪತ್ನಿಯನ್ನು ನಿಲ್ಲಿಸುತ್ತೇನೆ. ಇಲ್ಲವಾದಲ್ಲಿ ಬೇರೆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ..

heruru-modi-preparation-over-local-body-election-in-gangavathi
ಚುನಾವಣೆ ಘೋಷಣೆಗೂ ಮುನ್ನವೇ ಅಖಾಡಕ್ಕಿಳಿದ ‘ಹೇರೂರು ಮೋದಿ’..!

By

Published : Apr 6, 2021, 10:00 PM IST

ಗಂಗಾವತಿ (ಕೊಪ್ಪಳ) :ಚುನಾವಣೆ ಘೋಷಣೆಯಾದ ಬಳಿಕ ಅಥವಾ ಪಕ್ಷದಿಂದ ಕ್ಯಾಂಡಿಡೇಟ್ ಫೈನಲ್ ಆದ ಬಳಿಕವಷ್ಟೇ ಸಹಜವಾಗಿ ಚುನಾವಣಾ ಪ್ರಚಾರಕ್ಕೆ ಧುಮುಕುವುದು ನೋಡಿದ್ದೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಜಿಲ್ಲಾ ಪಂಚಾಯತ್‌ ಚುನಾವಣೆಗೂ ಮುಂಚೆಯೇ ಅಖಾಡದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದಾನೆ.

ಇಲ್ಲಿನ ವಡ್ಡರ ಹಟ್ಟಿಯ ಜಿಲ್ಲಾ ಪಂಚಾಯತ್‌ ಕ್ಷೇತ್ರದಲ್ಲಿ ವೆಂಕಾರೆಡ್ಡಿ ವಗರನಾಳ ಎಂಬಾತ ಚುನಾವಣೆ ಘೋಷಣೆಗೂ ಮುನ್ನವೇ ಜನರ ಮುಂದೆ ಮತ ಯಾಚಿಸುತ್ತಿದ್ದಾರೆ. ಕ್ಷೇತ್ರದಲ್ಲಿ ತನ್ನದೇ ಆದ ಅಭಿಮಾನಿಗಳನ್ನ ಹೊಂದಿರುವ ಈತನನ್ನು ಹೇರೂರು ಮೋದಿ ಅಂತಲೇ ಜನ ಗುರುತಿಸುತ್ತಾರೆ.

ಚುನಾವಣೆ ಘೋಷಣೆಗೂ ಮುನ್ನವೇ ಅಖಾಡಕ್ಕಿಳಿದ ‘ಹೇರೂರು ಮೋದಿ’..!

ಈ ಬಾರಿ ಕ್ಷೇತ್ರದಿಂದ ಸ್ಪರ್ಧಿಸಲೇಬೇಕು ಎಂದು ಪಣತೊಟ್ಟಿರುವ ಈತ, ಈಗಾಗಲೇ ಕ್ಷೇತ್ರದ ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಕೂಲಿಕಾರರು ಇರುವಲ್ಲಿಗೆ ಊಟ, ಉಪಹಾರ, ನೀರು ಸರಬರಾಜು ಮಾಡುವ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ.

ನಾನಾ ಗ್ರಾಮಗಳಲ್ಲಿ ಯುವಕರ ಪಡೆ ಕಟ್ಟಿಕೊಂಡು, ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಕ್ಷೇತ್ರಕ್ಕೆ ಇನ್ನೂ ಮೀಸಲಾತಿ ಪ್ರಕಟವಾಗಿಲ್ಲ. ಮಹಿಳೆ ಬಂದರೆ ತನ್ನ ಪತ್ನಿಯನ್ನು ನಿಲ್ಲಿಸುತ್ತೇನೆ. ಇಲ್ಲವಾದಲ್ಲಿ ಬೇರೆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಈ ಬಾರಿ ಸ್ಪರ್ಧೆ ಖಚಿತ ಅಂತಾರೆ ವೆಂಕಾರೆಡ್ಡಿ.

ABOUT THE AUTHOR

...view details