ಕುಷ್ಟಗಿ(ಕೊಪ್ಪಳ):ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿ ಜಾರಿ ಮಾಡಿ, ಒಳ ಮೀಸಲಾತಿ ನೀಡದಿದ್ದಲ್ಲಿ ದೆಹಲಿ ಮಾದರಿ ಹೋರಾಟ ಎದುರಿಸಬೇಕಾದೀತು ಎಂದು ಮಾದಿಗ ಚೈತನ್ಯ ರಥ ಯಾತ್ರೆ ಮುಖ್ಯಸ್ಥ ಹೆಣ್ಣೂರು ಲಕ್ಷ್ಮಿ ನಾರಾಯಣ ಎಚ್ಚರಿಕೆ ನೀಡಿದ್ದಾರೆ.
ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಮಾದಿಗ ವಿರಾಟ್ ಶಕ್ತಿ ಪ್ರದರ್ಶನ ನಿಮಿತ್ತ ನಡೆಯುತ್ತಿರುವ ಮಾದಿಗ ಚೈತನ್ಯ ರಥಯಾತ್ರೆ ಇಲಕಲ್ನಿಂದ ಕುಷ್ಟಗಿ ಪಟ್ಟಣ ತಲುಪಿತು. ಈ ವೇಳೆ, ಮಾತನಾಡಿದ ಹೆಣ್ಣೂರು ಲಕ್ಷ್ಮಿ ನಾರಾಯಣ, ಕಳೆದ ಶಿರಾ ಉಪ ಚುನಾವಣೆಯಲ್ಲಿ ಸದಾಶಿವ ಆಯೋಗ ವರದಿ ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು. ಚುನಾವಣೆ ನಂತರ ಅದನ್ನು ಮರೆತಿದ್ದಾರೆ.