ಕುಷ್ಟಗಿ (ಕೊಪ್ಪಳ):ಶೇ.90ರಷ್ಟು ಬೈಕ್ ಅಪಘಾತ ಸಾವುಗಳು ಹೆಡ್ ಇಂಜೂರಿಯಿಂದ ಸಂಭವಿಸುತ್ತವೆ ಎಂಬುದನ್ನು ಬೈಕ್ ಸವಾರರು ಅರಿತುಕೊಳ್ಳಬೇಕೆಂದು ಗಂಗಾವತಿ ಉಪ ವಿಭಾಗದ ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ ಹೇಳಿದರು.
ಕುಷ್ಟಗಿಯಲ್ಲಿ ಪೊಲೀಸ್ ಇಲಾಖೆ ಆಯೋಜಿಸಿದ್ದ ಹೆಲ್ಮೆಟ್ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಲ್ಮೆಟ್ ರಹಿತ ಬೈಕ್ ಸವಾರಿಯಿಂದಾಗುವ ಮರಣಗಳನ್ನು ತಪ್ಪಿಸಲು ಹೆಲ್ಮೆಟ್ ಜಾಗೃತಿ ಮೂಡಿಸಲಾಗುತ್ತಿದೆ. ಬೈಕ್ ಸವಾರರು ಪೊಲೀಸರ ದಂಡದ ಭಯದಿಂದ ಕಾಟಾಚಾರಕ್ಕೆ ಹೆಲ್ಮೆಟ್ ಧರಿಸುತ್ತಿದ್ದಾರೆ. ಸವಾರರು ಕಾಟಾಚಾರಕ್ಕೆ ಹೆಲ್ಮೆಟ್ ಧರಿಸದೇ, ನಿಮ್ಮ ಕುಟುಂಬಗಳ ಮೇಲಿನ ಕಾಳಜಿಯಿಂದ ಧರಿಸಿರಿ ಎಂದು ಕಿವಿಮಾತು ಹೇಳಿದರು.