ಕರ್ನಾಟಕ

karnataka

ETV Bharat / state

ಗಂಗಾವತಿ: ಮಳೆ ಅವಾಂತರಕ್ಕೆ ಹತ್ತಾರು‌ ಮನೆಗಳಿಗೆ ಹಾನಿ, ಬುಡಮೇಲಾದ ವಿದ್ಯುತ್​ ಕಂಬಗಳು - gangavathi rain news

ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕನಕಗಿರಿ ತಾಲೂಕಿನಲ್ಲಿ ಮನೆಗಳಿಗೆ ಹಾನಿಯಾಗಿದ್ದು, ವಿದ್ಯುತ್​​ ಕಂಬಗಳು ನೆಲಕ್ಕುರುಳಿವೆ.

Heavy rain
ಮಳೆಯ ಅವಾಂತರ

By

Published : Apr 21, 2020, 9:09 AM IST

ಗಂಗಾವತಿ:ರಾತ್ರಿ ಸುರಿದ ಅಕಾಲಿಕ ಮಳೆ ಮತ್ತು ಭಾರಿ ಗಾಳಿಯಿಂದಾಗಿ ಹತ್ತಾರು ಮನೆಗಳಿಗೆ ಹಾನಿಯಾಗಿದ್ದ, ಮರ-ಗಿಡ ಹಾಗೂ ವಿದ್ಯುತ್ ಕಂಬಗಳು ಬುಡ ಮೇಲಾದ ಘಟನೆ ಕನಕಗಿರಿ ತಾಲೂಕಿನಲ್ಲಿ ನಡೆದಿದೆ.

ತಾಲ್ಲೂಕಿನ ಡಂಕನಕಲ್, ತಿಂಡಿಹಾಳ, ಹಣವಾಳ, ಸಿಂಗನಾಳ ಮೊದಲಾದ ಗ್ರಾಮಗಳಲ್ಲಿ ಹತ್ತಾರು ಮನೆಗಳು ಜಖಂಗೊಂಡಿದ್ದು, ಸುಮಾರು ಎಂಟಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿದ ಘಟನೆ ನಡೆದಿದೆ. ಕಳೆದ ಎರಡು ವಾರದಲ್ಲಿ ಮೂರನೆ ಬಾರಿಗೆ ಅಕಾಲಿಕವಾಗಿ ಮಳೆ ಸುರಿಯುತ್ತಿದ್ದು, ಅತ್ತ ರೈತರಿಗೆ ಇತ್ತ ಜನ ಸಾಮನ್ಯರಿಗೆ ಸಮಸ್ಯೆಯಾಗಿ ಕಾಡುತ್ತಿದೆ.

ಇನ್ನು ರಭಸವಾಗಿ ಬೀಸಿದ ಗಾಳಿಗೆ ಮನೆಗೆ ಹೊದಿಸಿದ್ದ ತಗಡುಗಳು ನೂರಾರು ಮೀಟರ್ ದೂರಕ್ಕೆ ಹಾರಿ ಬಿದ್ದಿವೆ. ಮಳೆಗೆ ಧವಸ ಧಾನ್ಯ, ಹೊದಿಕೆ ನೀರುಪಾಲಾಗಿವೆ ಎಂದು ತಿಳಿದು ಬಂದಿದೆ.

ABOUT THE AUTHOR

...view details