ಕುಷ್ಟಗಿ (ಕೊಪ್ಪಳ):ನಿನ್ನೆಯಿಂದ ಸುರಿಯುತ್ತಿರುವ ಮಳೆಯ ಅಬ್ಬರ ಅವಾಂತರ ಸೃಷ್ಟಿಸಿದೆ. ತಾಲೂಕಿನ ಕಬ್ಬರಗಿ ಪಕ್ಕದ ಹಳ್ಳದಿಂದ ಗ್ರಾಮದೊಳಗೆ ನೀರು ನುಗ್ಗಿದ್ದು, ಕೆಲವು ಮನೆಗಳು ಜಲಾವೃತವಾಗಿವೆ.
ಕುಷ್ಟಗಿಯಲ್ಲಿ ವರುಣನ ಅಬ್ಬರ: ಗ್ರಾಮಕ್ಕೆ ನುಗ್ಗಿದ ನೀರು, ಮನೆಗಳು ಜಲಾವೃತ - ತಾಲೂಕಿನ ನಿಡಶೇಸಿ ಕೆರೆಗೂ ನೀರಿನ ಒಳ ಹರಿವು
ಬಾದಿಮಿನಾಳ ಗ್ರಾಮದ ಅಂಬೇಡ್ಕರ್ ನಗರದಲ್ಲಿ ನೀರು ನುಗ್ಗಿದ್ದರಿಂದ ನಿವಾಸಿಗಳು ತೊಂದರೆ ಅನುಭವಿಸಿದರು. ಹನುಮನಾಳ ಹೋಬಳಿಯ ನಿಲೋಗಲ್ ಅಚನೂರು ಮಲ್ಲಯ್ಯ ರಸ್ತೆಯ ಹಳ್ಳ ಅಪಾಯದ ಮಿತಿ ಮೀರಿ ಹರಿದಿದೆ. ತಾಲೂಕಿನ ಜಾಗೀರಗುಡದರು ಕೆರೆ ಭರ್ತಿಯಾಗುತ್ತಿದ್ದು, ತಾಲೂಕಿನ ನಿಡಶೇಸಿ ಕೆರೆಗೂ ನೀರಿನ ಒಳ ಹರಿವು ಹೆಚ್ಚಿದೆ.
ಕುಷ್ಟಗಿ: ವರುಣನ ಅಬ್ಬರಕ್ಕೆ ಗ್ರಾಮಕ್ಕೆ ನುಗ್ಗಿದ ನೀರು, ಮನೆಗಳು ಜಲಾವೃತ
ಬಾದಿಮಿನಾಳ ಗ್ರಾಮದ ಅಂಬೇಡ್ಕರ್ ನಗರದಲ್ಲಿ ನೀರು ನುಗ್ಗಿದ್ದರಿಂದ ನಿವಾಸಿಗಳು ತೊಂದರೆ ಅನುಭವಿಸಿದರು. ಹನುಮನಾಳ ಹೋಬಳಿಯ ನಿಲೋಗಲ್ ಅಚನೂರು ಮಲ್ಲಯ್ಯ ರಸ್ತೆಯ ಹಳ್ಳ ಅಪಾಯದ ಮಿತಿ ಮೀರಿ ಹರಿದಿದೆ. ತಾಲೂಕಿನ ಜಾಗೀರಗುಡದರು ಕೆರೆ ಭರ್ತಿಯಾಗುತ್ತಿದ್ದು, ತಾಲೂಕಿನ ನಿಡಶೇಸಿ ಕೆರೆಗೂ ನೀರಿನ ಒಳ ಹರಿವು ಹೆಚ್ಚಿದೆ.
ತಾಲೂಕಿನಾದ್ಯಂತ ಶನಿವಾರ ಮಳೆರಾಯ ರೌದ್ರನರ್ತನ ತೋರುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಮಧ್ಯಾಹ್ನದ ಮಳೆರಾಯ ಕೊಂಚ ಕಡಿಮೆಯಾದರೂ ಮೋಡ ಕವಿದ ವಾತಾವರಣ ಮತ್ತೆ ಮಳೆ ಬೀಳುವ ಮುನ್ಸೂಚನೆ ನೀಡಿದೆ.