ಕೊಪ್ಪಳ : ಜಿಲ್ಲೆಯ ವಿವಿಧೆಡೆ ನಿನ್ನೆ ಮಳೆರಾಯ ಅಬ್ಬರಿಸಿದ ಪರಿಣಾಮ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳದಲ್ಲಿ ಗ್ರಾಮದಲ್ಲಿ ಹಳ್ಳದ ಮಧ್ಯೆದಲ್ಲಿ ಸಿಲುಕಿದ್ದ ಅಜ್ಜಿ ಹಾಗೂ ಮೊಮ್ಮಗಳನ್ನ ಸ್ಥಳೀಯರು ರಕ್ಷಿಸಿದ್ದಾರೆ.
ಪುಣ್ಯ ಬರಲೇ ಯಪ್ಪಾ ನಿಮ್ಗಾ, ಅಜ್ಜಿ-ಮೊಮ್ಮಗಳನ್ನ ಕಾಪಾಡಿದ್ರೀ... ನೀರಿನ ಸೆಳೆತಕ್ಕೆ ಸಿಲುಕಿದ್ದ ಎರಡು ಜೀವ ಬಚಾವ್.. - kannada news
ಹಳ್ಳ ದಾಟಿಸಿ ತಮ್ಮನ್ನು ರಕ್ಷಿಸುವಂತೆ ಅಜ್ಜಿ ಮೊಮ್ಮಗಳು ಕೂಗಾಡಿದ್ದಾರೆ. ಇವರ ಕೂಗಾಟ ಕೇಳಿಸಿಕೊಂಡ ದಾರಿಹೋಕರು ಏಣಿ ಹಾಗೂ ಹಗ್ಗದ ಸಹಾಯದಿಂದ ಅಜ್ಜಿ ಹಾಗೂ ಮೊಮ್ಮಗಳನ್ನು ಹಳ್ಳ ದಾಟಿಸಿ ರಕ್ಷಿಸಿದ್ದಾರೆ.
ಭಾರಿ ಮಳೆ ತುಂಬಿ ಹರಿದ ಹಳ್ಳ ದಾರಿ ಕಾಣದೆ ಪರದಾಡಿದ ಅಜ್ಜಿ ಮೊಮ್ಮಗಳ ರಕ್ಷಣೆ
ಬೇವಿನಬೀಜ ಆರಿಸಲು ಸಂಗನಾಳ ಗ್ರಾಮದ ಅಜ್ಜಿ ಮಲ್ಲಮ್ಮ ಹಾಗೂ ಅವರ ಮೊಮ್ಮಗಳು ಗಂಗಮ್ಮ ಇಬ್ಬರೂ ತಾಲೂಕಿನ ಸಂಗನಾಳ ಗ್ರಾಮದ ಹಿರೇಹಳ್ಳ ದಾಟಿ ಹೋಗಿದ್ದರು. ಈ ಸಂದರ್ಭದಲ್ಲಿ ಮಳೆಯಾಗಿದ್ದರಿಂದ ಹಳ್ಳದಲ್ಲಿ ನೀರು ಬಂದಿದೆ. ವಾಪಸ್ ಬರಲು ದಾರಿ ಇಲ್ಲದೇ ಅಜ್ಜಿ-ಮೊಮ್ಮಗಳು ಪರದಾಡಿದ್ದಾರೆ.
ಹಳ್ಳ ದಾಟಿಸಿ ತಮ್ಮನ್ನು ರಕ್ಷಿಸುವಂತೆ ಅಜ್ಜಿ-ಮೊಮ್ಮಗಳು ಕೂಗಾಡಿದ್ದಾರೆ. ಇವರ ಕೂಗಾಟ ಕೇಳಿಸಿಕೊಂಡ ದಾರಿಹೋಕರು ಏಣಿ ಹಾಗೂ ಹಗ್ಗದ ಸಹಾಯದಿಂದ ಅವರಿಬ್ಬರನ್ನೂ ಹಳ್ಳ ದಾಟಿಸಿ ರಕ್ಷಿಸಿದ್ದಾರೆ.