ಗಂಗಾವತಿ :ನಗರ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಧಾರಾಕಾರ ಮಳೆ ಸುರಿದಿದೆ. ಈ ಮೂಲಕ ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನರಿಗೆ ವರುಣ ತಂಪಿನ ಸಿಂಚನ ನೀಡಿದ್ದಾನೆ.
ಗಂಗಾವತಿ ಸುತ್ತಲೂ ಧಾರಾಕಾರ ಮಳೆ ತಂಪೆರೆದ ವರುಣ.. - heavy rain in gangavati
ಮಧ್ಯಾಹ್ನ 3 ಗಂಟೆಗೆ ಆರಂಭವಾದ ಮಳೆ ಸತತ 2 ಗಂಟೆಗೂ ಅಧಿಕ ಕಾಲ ಸುರಿಯಿತು. ಭಾರಿ ಪ್ರಮಾಣದ ಗುಡುಗು, ಮಿಂಚು ಸಹಿತ ಮಳೆ ಸುರಿದ ಪರಿಣಾಮ ನಗರ ಬಹುತೇಕ ರಸ್ತೆಗಳಲ್ಲಿ ಮಳೆ ನೀರು ಕಾಲುವೆಯಂತೆ ಹರಿಯಿತು.

ಮಧ್ಯಾಹ್ನ ಮೂರು ಗಂಟೆಗೆ ಆರಂಭವಾದ ಮಳೆ ಸತತ ಎರಡು ಗಂಟೆಗೂ ಅಧಿಕ ಕಾಲ ಸುರಿಯಿತು. ಭಾರಿ ಪ್ರಮಾಣದ ಗುಡುಗು, ಮಿಂಚು ಸಹಿತ ಮಳೆ ಸುರಿದ ಪರಿಣಾಮ ನಗರ ಬಹುತೇಕ ರಸ್ತೆಗಳಲ್ಲಿ ಮಳೆ ನೀರು ಕಾಲುವೆಯಂತೆ ಹರಿಯಿತು.
ಮಳೆ ನೀರಿನ ರಭಸಕ್ಕೆ ಚರಂಡಿಗಳು ತುಂಬಿ ರಸ್ತೆಗಳ ಮೇಲೂ ನೀರು ಹರಿಯಿತು. ಈ ಬಿರು ಬೇಸಿಗೆಯಲ್ಲಿ ಸುರಿದ ಮೊದಲ ಮಳೆಯಿಂದಾಗಿ ವಾತಾವರಣ ಕೊಂಚ ತಂಪಾಗಿದೆ. ಆದರೆ, ಈಗಾಗಲೇ ಭತ್ತದ ಬೆಳೆ ನಾಟಿ ಮಾಡಿರುವ ರೈತರ ಮೇಲೆ ಈ ಮಳೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಆತಂಕ ಮನೆ ಮಾಡಿದೆ.