ಗಂಗಾವತಿ:ತಾಲೂಕಿನ ನೀರಾವರಿ ಪ್ರದೇಶದಲ್ಲಿ ಮಂಗಳವಾರ ಸಂಜೆ ಸುರಿದ ಭಾರಿ ಮಳೆಗೆ ಹಾನಿಗೀಡಾದ ಭತ್ತದ ಗದ್ದೆಗಳಿಗೆ ಸಂಸದ ಮತ್ತು ಶಾಸಕರು ಭೇಟಿ ನೀಡಿ ರೈತರ ಮನವಿ ಆಲಿಸಿದ್ದಾರೆ.
ಗಂಗಾವತಿಯಲ್ಲಿ ಭಾರಿ ಮಳೆ: ಬೆಳೆ ಹಾನಿ ಪ್ರದೇಶಕ್ಕೆ ಸಂಸದ, ಶಾಸಕ ಭೇಟಿ - ಸರಕಾರಕ್ಕೆ ವರದಿ ನೀಡಿ ಪರಿಹಾರಕ್ಕೆ ಮನವಿ
ತಾಲೂಕಿನ ನೀರಾವರಿ ಪ್ರದೇಶದಲ್ಲಿ ಮಂಗಳವಾರ ಸಂಜೆ ಸುರಿದ ಭಾರಿ ಮಳೆಗೆ ಹಾನಿಗೀಡಾದ ಭತ್ತದ ಗದ್ದೆಗಳಿಗೆ ಸಂಸದ ಕರಡಿ ಸಂಗಣ್ಣ ಮತ್ತು ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ ರೈತರ ಅಹವಾಲು ಆಲಿಸಿದ್ದಾರೆ.
ಭಾರಿ ಮಳೆಗೆ ಭತ್ತದ ಬೆಳೆ ಹಾನಿ: ಗಂಗಾವತಿಯಲ್ಲಿ ಸಂಸದ, ಶಾಸಕ ಭೇಟಿ
ತಾಲೂಕಿನ ಬಸವಪಟ್ಟಣ, ವಡ್ಡರಹಟ್ಟಿ, ಆನೆಗೊಂದಿ ಮೊದಲಾದ ಪ್ರದೇಶದಲ್ಲಿನ ರೈತರ ಹೊಲಗಳಿಗೆ ಭೇಟಿ ನೀಡಿದ ಸಂಸದ ಕರಡಿ ಸಂಗಣ್ಣ ಮತ್ತು ಶಾಸಕ ಪರಣ್ಣ ಮುನವಳ್ಳಿ, ರೈತರೊಂದಿಗೆ ಮಾತನಾಡಿ ಏನೆಲ್ಲಾ ಹಾನಿಯಾಗಿದೆ ಎಂಬ ಬಗ್ಗೆ ಪ್ರಾಥಮಿಕ ಮಾಹಿತಿ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಸರಕಾರಕ್ಕೆ ವರದಿ ನೀಡಿ ಬೆಳೆ ಹಾನಿ ಪರಿಹಾರಕ್ಕೆ ಮನವಿ ಮಾಡಲಾಗುವುದು ಎಂದರು.