ಕರ್ನಾಟಕ

karnataka

ETV Bharat / state

ಗಂಗಾವತಿಯಲ್ಲಿ ಭಾರಿ ಮಳೆ: ಸರ್ಕಾರಿ ಕಚೇರಿಗಳಿಗೆ ಜಲ ದಿಗ್ಬಂಧನ - ಸರ್ಕಾರಿ ಕಚೇರಿ

ಗಂಗಾವತಿಯಲ್ಲಿ ಭಾರಿ ಮಳೆಯಿಂದಾಗಿ ಸರ್ಕಾರಿ ಕಚೇರಿಗಳಿಗೆ ಜಲ ದಿಗ್ಬಂಧನ ಎದುರಾಗಿದೆ. ಮಳೆ ನೀರಿನಿಂದ ಕಚೇರಿಗಳ ಆವರಣಗಳು ಜಲಾವೃತವಾಗಿವೆ.

ಜಲ ದಿಗ್ಭಂಧನ

By

Published : Sep 25, 2019, 8:14 AM IST

ಗಂಗಾವತಿ:ನಗರ ಸೇರಿದಂತೆ ಸುತ್ತಮುತ್ತಲು ಧಾರಾಕಾರವಾಗಿ ಮಳೆ ಸುರಿದಿದೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲೇ ಇಷ್ಟೊಂದು ಮಳೆಯನ್ನು ಜನ ಕಂಡಿರಲಿಲ್ಲ.

ಕಳೆದ ಎರಡು ದಿನಗಳಲ್ಲಿ ಅಬ್ಬರಿಸಿದ ಮಳೆಯಿಂದಾಗಿ ನಗರದ ಚರಂಡಿಗಳು ತುಂಬಿಕೊಂಡು, ರಸ್ತೆಗಳ ಮೇಲೆ ಹರಿದು ಜನ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.

ಗಂಗಾವತಿಯಲ್ಲಿ ಮಳೆಯಿಂದ ಸರ್ಕಾರಿ ಕಚೇರಿಗಳಿಗೆ ಜಲ ದಿಗ್ಬಂಧನ

ಇನ್ನು, ನಗರಸಭೆಯ ಆವರಣ, ಪಶುಪಾಲನಾ ಇಲಾಖೆ, ಸರ್ಕಾರಿ ಜೂನಿಯರ್ ಕಾಲೇಜು, ಕ್ರೀಡಾಂಗಣ, ಕೋಳಿ ಸಂವರ್ಧನ ಇಲಾಖೆ ಸೇರಿದಂತೆ ನಾನಾ ಇಲಾಖೆಗಳ ಕಚೇರಿಗಳು ತಗ್ಗು ಪ್ರದೇಶದಲ್ಲಿರುವುದರಿಂದ ಜಲ ಜಲ ದಿಗ್ಬಂಧನವಾಗಿದೆ. ಜನ ಪ್ರಯಾಸಪಟ್ಟು ಕಚೇರಿಗೆ ತೆರಳುವ ಸ್ಥಿತಿ ಕಂಡುಬಂತು.

ABOUT THE AUTHOR

...view details