ಕರ್ನಾಟಕ

karnataka

ETV Bharat / state

ಕೊಪ್ಪಳದಲ್ಲಿ ಕೊರೊನಾ ಲಸಿಕೆ ಹಂಚಲು ಆರೋಗ್ಯ ಇಲಾಖೆ ಸಿದ್ಧತೆ - Corona Vaccine

ಮಹಾಮಾರಿ ಕೊರೊನಾಗೆ ವ್ಯಾಕ್ಸಿನ್​ ಕೆಲ ದಿನಗಳಲ್ಲಿ ಲಭ್ಯವಾಗಲಿದೆ ಎಂದು ಸರ್ಕಾರ ಸೂಚನೆ ನೀಡಿರುವ ಹಿನ್ನೆಲೆ ಕೊಪ್ಪಳದಲ್ಲಿ ಲಸಿಕೆ ಶೇಖರಿಸಲು ಹಾಗೂ ಹಂಚಲು ಸಿದ್ಧತೆ ನಡೆಸಲಾಗಿದೆ.

sdsd
ಕೊಪ್ಪಳದಲ್ಲಿ ಕೊರೊನಾ ಲಸಿಕೆ ಹಂಚಲು ಆರೋಗ್ಯ ಇಲಾಖೆ ಸಿದ್ಧತೆ

By

Published : Dec 2, 2020, 11:29 AM IST

ಕೊಪ್ಪಳ: ಶೀಘ್ರದಲ್ಲಿಯೇ ಕೊರೊನಾ ಲಸಿಕೆ ಲಭ್ಯವಾಗುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆ ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಕೊಪ್ಪಳದಲ್ಲಿ ಕೊರೊನಾ ಲಸಿಕೆ ಹಂಚಲು ಆರೋಗ್ಯ ಇಲಾಖೆ ಸಿದ್ಧತೆ

ಈ ಕುರಿತಂತೆ ಡಿಹೆಚ್​ಓ ಡಾ. ಲಿಂಗರಾಜ ಈಟಿವಿ ಭಾರತದೊಂದಿಗೆ ಮಾತನಾಡಿ, ಜಿಲ್ಲೆಗೆ ಬರಲಿರುವ ಲಸಿಕೆಯನ್ನು ಆರೋಗ್ಯ ಇಲಾಖೆಯ ಉಗ್ರಾಣದಲ್ಲಿ ಮತ್ತು ಜಿಲ್ಲೆಯಲ್ಲಿರುವ 60 ಡಿ ಫ್ರೀಝರ್ ಮತ್ತು 60 ಐಎಲ್ಆರ್ ಗಳಲ್ಲಿ ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದರು.

ಲಸಿಕೆಯನ್ನು ಮೊದಲು ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ ನೀಡಲು ಮಾಹಿತಿ ಸಿದ್ಧಪಡಿಸಿಕೊಳ್ಳಲಾಗಿದೆ. ಒಟ್ಟು ಸುಮಾರು 10 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಮಾಹಿತಿ ಸಿದ್ದಪಡಿಸಿಕೊಂಡು ಸರ್ಕಾರದ ಸೂಚನೆಯಂತೆ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details