ಕೊಪ್ಪಳ: ವೃದ್ಧರೋರ್ವರಿಗೆ ಕೊರೊನಾ ಲಸಿಕೆ ಹಾಕಿಸಲು ಕಂದಾಯ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗೆದಿಗೇರಿ ಗ್ರಾಮದಲ್ಲಿ ನಡೆದಿದೆ.
'ನಾನು ಆರಾಮ ಇದ್ದೀನಿ..ನನಗೆ ಇಂಜೆಕ್ಷನ್ ಹಾಕಿ ಸಾಯ್ಸಿಬ್ಯಾಡ್ರಿ.. ನನ್ನ ಕೈಬಿಡ್ರೀ'
ಕೊರೊನಾ ಲಸಿಕೆ ಕುರಿತು ಜನರಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಸಹ ಇನ್ನೂ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಹಲವರು ಹಿಂದೇಟು ಹಾಕುತ್ತಿದ್ದಾರೆ. ಅಲ್ಲಲ್ಲಿ ರಗಳೆ, ರಂಪಾಟಗಳು ಮುಂದುವರಿದಿವೆ.
ಗೆದಗೇರಿ ಗ್ರಾಮದಲ್ಲಿ ನಿನ್ನೆ ಕಂದಾಯ ಇಲಾಖೆ ಹಾಗೂ ಆರೋಗ್ಯ ಇಲಾಖೆಯಿಂದ ಕೊರೊನಾ ಲಸಿಕಾಭಿಯಾನ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ವೃದ್ಧರೊಬ್ಬರಿಗೆ ಲಸಿಕೆ ಹಾಕಲು ಇಲಾಖೆಯ ಸಿಬ್ಬಂದಿ ತೆರಳಿದ್ದರು. ಈ ಸಂದರ್ಭದಲ್ಲಿ ತನ್ನ ವರಸೆ ತೆಗೆದ ವೃದ್ಧ, "ನಾನು ಆರಾಮ ಇದ್ದೀನಿ..ನನಗೆ ಇಂಜೆಕ್ಷನ್ ಹಾಕಿ ಸಾಯ್ಸಿಬ್ಯಾಡ್ರಿ.. ನನ್ನ ಕೈಬಿಡ್ರಿ" ಎಂದು ಬಾಯಿ ಬಾಯಿ ಬಡಿದುಕೊಂಡು ರಂಪಾಟ ಮಾಡಿದ್ದಾರೆ. ಆದರೂ ಸಹ ಹರಸಾಹಸಪಟ್ಟ ಸಿಬ್ಬಂದಿ ಆತನ ಮನವೊಲಿಸಿ ಲಸಿಕೆ ಹಾಕಿದ್ದಾರೆ.
ಇದನ್ನೂ ಓದಿ:ಜಾಂಜ್ ಮೇಳದಲ್ಲಿ ತೆರಳಿ ಜನರಿಗೆ ಕೋವಿಡ್ ಲಸಿಕೆ: ಕೊಪ್ಪಳ ಜಿಲ್ಲಾಡಳಿತದ ವಿನೂತನ ಪ್ರಯತ್ನ