ಕೊಪ್ಪಳ: ಕೊರೊನಾ ಲಸಿಕೆ ಪಡೆಯಲು ಜಿಲ್ಲೆಯಲ್ಲಿ ಕೆಲ ಜನರಿಂದ ಅಸಹಕಾರ ಮುಂದುವರದಿದೆ. ಜಿಲ್ಲೆಯ ಕೆಲವೆಡೆ ಲಸಿಕೆ ಹಾಕಿಸಿಕೊಳ್ಳಿ ಎಂದು ಜನರ ಕೈಕಾಲು ಮುಗಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಯ ಮುಖ್ಯಶಿಕ್ಷಕರೊಬ್ಬರು ನಿಮ್ಮ ಕಾಲು ಬೀಳ್ತೇನಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಿ ಎಂದು ಮಹಿಳೆಗೆ ಮನವಿ ಮಾಡಿರುವ ಘಟನೆ ಕೊಪ್ಪಳ ತಾಲೂಕಿನ ಹಳೆಗೊಂಡಬಾಳ ಗ್ರಾಮದಲ್ಲಿ ನಡೆದಿದೆ.
ಕೊಪ್ಪಳ: ನಿಮ್ಮ ಕಾಲಿಗೆ ಬೀಳ್ತೇನಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ: ಮಹಿಳೆಗೆ ಮುಖ್ಯ ಶಿಕ್ಷಕನ ಮನವಿ - ಕೊಪ್ಪಳ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಮಹಿಳೆ ನಿರಾಕರಿಸಿದ ಹಿನ್ನೆಲೆಯಲ್ಲಿ ನಿಮ್ಮ ಕಾಲಿಗೆ ಬೀಳ್ತೇನಿ ಲಸಿಕೆ ಹಾಕಿಸಿಕೊಳ್ಳಿ ಎಂದು ಮುಖ್ಯ ಶಿಕ್ಷಕರು ಬೇಡಿಕೊಂಡಿರುವ ಘಟನೆ ಕೊಪ್ಪಳ ತಾಲೂಕಿನ ಹಳೆಗೊಂಡಬಾಳ ಗ್ರಾಮದಲ್ಲಿ ನಡೆದಿದೆ.
ಕೊಪ್ಪಳ: ನಿಮ್ಮ ಕಾಲಿಗೆ ಬೀಳ್ತೀನಿ ಲಸಿಕೆ ಹಾಕಿಸಿಕೊಳ್ಳಿ; ಮಹಿಳೆಗೆ ಮುಖ್ಯ ಶಿಕ್ಷಕನ ಮನವಿ
ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ ಹಾಗೂ ಉಪನೋಂದಣಾಧಿಕಾರಿ ರುದ್ರಮೂರ್ತಿ ನೇತೃತ್ವದಲ್ಲಿ ಹಳೆಗೊಂಡಬಾಳ ಗ್ರಾಮದಲ್ಲಿ ಲಸಿಕಾ ಅಭಿಯಾನ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮದ ಲಕ್ಷ್ಮವ್ವ ಎಂಬ ಮಹಿಳೆ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದಳು. ಆಗ ಸ್ಥಳದಲ್ಲಿದ್ದ ಸ್ಥಳೀಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ ಚಿತ್ರಗಾರ ಅವರು ನಿಮ್ಮ ಕಾಲಿಗೆ ಬೀಳ್ತೇನಿ ಲಸಿಕೆ ಹಾಕಿಸಿಕೊಳ್ಳಿ ಎಂದು ಬೇಡಿಕೊಂಡಿದ್ದಾರೆ.
Last Updated : Sep 18, 2021, 7:48 PM IST